Advertisement

ಲಂಕೆಗೆ 1 ವಿಕೆಟ್‌ ರೋಚಕ ಗೆಲುವು

12:30 AM Feb 17, 2019 | |

ಕಿಂಗ್ಸ್‌ಮೇಡ್‌: ಕುಸಲ್‌ ಪೆರೆರ ಅವರ ಸಾಹಸದ ಶತಕದ ನೆರವಿನಿಂದ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಡರ್ಬನ್‌ ಟೆಸ್ಟ್‌ನಲ್ಲಿ ಒಂದು ವಿಕೆಟ್‌ ಅಂತರದ ರೋಚಕ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಪೆರೆರ ಅವರ ಜೀವನಶ್ರೇಷ್ಠ ಅಜೇಯ 153 ರನ್‌ ಮತ್ತು ಅವರು ವಿಶ್ವ ಫೆರ್ನಾಂಡೊ ಜತೆ ಮುರಿಯದ ಕೊನೆಯ ವಿಕೆಟಿಗೆ ಪೇರಿಸಿದ 78 ರನ್ನುಗಳ ಆಟದಿಂದಾಗಿ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ನೆಲದಲ್ಲಿ ಆಡಿದ 14 ಟೆಸ್ಟ್‌ ಪಂದ್ಯಗಳಲ್ಲಿ ತನ್ನ ಎರಡನೇ ಗೆಲುವು ಒಲಿಸಿಕೊಂಡಿತು. ಗೆಲ್ಲಲು 304 ರನ್‌ ಗಳಿಸುವ ಗುರಿ ಪಡೆದ ಶ್ರೀಲಂಕಾ ತಂಡವು 3 ವಿಕೆಟಿಗೆ 83 ರನ್ನಿನಿಂದ ನಾಲ್ಕನೇ ದಿನದ ಆಟ ಆರಂಭಿಸಿತ್ತು. ಒಂದು ಕಡೆಯಿಂದ ವಿಕೆಟ್‌ ಉರುಳುತ್ತಿದ್ದರೂ ಕುಸಲ್‌ ಪೆರೆರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಂಡದ ಗೆಲುವಿಗಾಗಿ ಹೋರಾಡಿದರು. 

Advertisement

ಧನಂಜಯ ಡಿ’ಸಿಲ್ವ ಮತ್ತು ಕುಸಲ್‌ 6ನೇ ವಿಕೆಟಿಗೆ 96 ರನ್‌ ಪೇರಿಸಿದ್ದರೂ ತಂಡ ಗೆಲುವಿನಿಂದ ದೂರವೇ ಉಳಿದಿತ್ತು. 226 ರನ್ನಿಗೆ 9ನೇ ವಿಕೆಟ್‌ ಉರುಳಿದಾಗ ಲಂಕೆಗೆ ಸೋಲು ಖಚಿತವೆಂದು ಭಾವಿಸಲಾಗಿತ್ತು. ಆದರೆ ಕುಸಲ್‌ ಮತ್ತು ವಿಶ್ವ ಫೆರ್ನಾಂಡೊ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಪ್ರದರ್ಶಿಸಿ ಲಂಕೆಗೆ ಅದ್ಭುತ ಗೆಲುವೊಂದನ್ನು ತಂದುಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next