ಬೆಂಗಳೂರು:ಜಿಮ್ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್‌ಗೆ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿದೆ.
ಜಾಮೀನು ಕೋರಿ ಆರೋಪಿಗಳಾದ ವಿಜಯ್ ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ 8ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ಜಾಮೀನು ಸಿಗದ ಹಿನ್ನೆಲೆಯಲ್ಲಿ ದುನಿಯಾ ವಿಜಯ್, ಪ್ರಸಾದ್, ಮಣಿ ಹಾಗೂ ಪ್ರಸಾದ್ ಅವರ ಪರ ವಕೀಲರು ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದಲ್ಲಿ ಗುರುವಾರ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಪತ್ನಿ ನಾಗರತ್ನ ಭೇಟಿಗೆ ಸಿಗಲಿಲ್ಲ ವಿಜಯ್
14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪತಿ ದುನಿಯಾ ವಿಜಯ್‌ರನ್ನು ಗುರುವಾರ ಅವರ ಮೊದಲ ಪತ್ನಿ ನಾಗರತ್ನ ಅವರು ಹೋದರು, ಭೇಟಿ ಸಾಧ್ಯವಾಗಿಲ್ಲ.ನಾಗರತ್ನ ಅವರ ಭೇಟಿಗೆ ನಿರಾಕರಿಸಿದ ವಿಜಯ್, ಪತ್ನಿ ತಂದಿದ್ದ ಊಟವನ್ನು ಸಹ ಬೇಡ ಎಂದು ಜೈಲಿನ ಸಿಬ್ಬಂದಿ ಬಳಿ ಹೇಳಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಪತಿ ವಿಜಯ್ ಭೇಟಿಗೆ ನಾಗರತ್ನ ಅವರು ಆಗಮಿಸಿದ್ದರು. ಆದರೆ, ಜೈಲು ನಿಯಮಾವಳಿಗಳ ಅನ್ವಯ ವಿಚಾರಣಾಧೀನ ಕೈದಿಗಳಿಗೆ ವಾರಕ್ಕೆ ಒಮ್ಮೆ ಮಾತ್ರ ಒಬ್ಬರು ಭೇಟಿ ಮಾಡಬಹುದು. ಹೀಗಾಗಿ ಅವಕಾಶ ನಿರಾಕರಿಸಲಾಯಿತು ಎಂದು ಜೈಲು ಅಧಿಕಾರಿಗಳು ತಿಳಿಸಿದರು.