Advertisement

ಅಭಿಷೇಕ್‌ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶನ?

04:08 AM May 27, 2020 | Lakshmi GovindaRaj |

ಇತ್ತೀಚೆಗಷ್ಟೇ ಪಾಪ್‌ ಕಾರ್ನ್ ಮಂಕಿ ಟೈಗರ್‌ ನಿರ್ದೇಶಿಸಿದ್ದ ದುನಿಯಾ ಸೂರಿ ಲಾಕ್‌ ಡೌನ್‌ ವೇಳೆ ಮತ್ತೂಂದು ಹೊಸಚಿತ್ರ ಮಾಡುವ ಸಿದ್ದತೆಯಲ್ಲಿದ್ದಾರೆ. ಅಂದಹಾಗೆ, ಈ ಚಿತ್ರವೊಂದರಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌  ಅಂಬರೀಶ್‌ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ.

Advertisement

ಕಳೆದ ವರ್ಷ ಮೇ ತಿಂಗಳಿನಲ್ಲಿ ಅಮರ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಅಭಿಷೇಕ್‌ ಅಂಬರೀಶ್‌ ತನ್ನ ಮುಂದಿನ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ  ಈಗಾಗಲೇ ಒಂದೆರಡು ನಿರ್ದೇಶಕರೊಂದಿಗೆ ಅಭಿಷೇಕ್‌ ಮಾತುಕತೆ ನಡೆಸಿದ್ದಾರೆ. ಈ ಲಾಕ್‌ಡೌನ್‌ ಅವಧಿಯಲ್ಲಿ ಅವರು ತನಗೆ ಬೇಕಾದ ಕಥೆಯ ಆಯ್ಕೆಗೆ  ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಭಿಷೇಕ್‌ ಇಲ್ಲಿಯವರೆಗೆ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.

ಇನ್ನು ದುನಿಯಾ ಖ್ಯಾತಿಯ ನಿರ್ದೇಶಕ ಸೂರಿ ಅವರೊಂದಿಗೆ ತಮ್ಮ ಮುಂದಿನ ಚಿತ್ರ ಮಾಡುವುದರ ಬಗ್ಗೆ ನಟ  ಅಭಿಷೇಕ್‌ ಮತ್ತು ನಿರ್ದೇಶಕ ಸೂರಿ ಚಿತ್ರಕಥೆಯ ಬಗ್ಗೆ ಪರಸ್ಪರ ಚರ್ಚಿಸಿದ್ದಾರೆ. ಲಾಕ್‌ ಡೌನ್‌ ಸಡಿಲವಾದ ಬಳಿಕ ಅಭಿಷೇಕ್‌ ನಿವಾಸದಲ್ಲಿ ಇಬ್ಬರೂ ಇತ್ತೀಚೆಗೆ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ದುನಿಯಾ ಸೂರಿ ಮತ್ತು  ಅಭಿಷೇಕ್‌ ಅಂಬರೀಶ್‌ ಹೊಸಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಈ ವಿಷಯ ಕಥೆ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next