Advertisement

ಡುಂಡಿರಾಜರ ಪುಕ್ಕಟೆ ಸಲಹೆ

01:13 PM Dec 02, 2017 | |



Advertisement

ಎಚ್‌. ಡುಂಡಿರಾಜ್‌ ಅವರ ಹಾಸ್ಯಪ್ರಜ್ಞೆ ಕೇವಲ ಹನಿಗವಿತೆಗಳಲ್ಲಿ ಮಾತ್ರವಲ್ಲ, ನಾಟಕಗಳ ಮೂಲಕವೂ ವ್ಯಕ್ತವಾಗಿದೆ. ಈಗಾಗಲೇ ಸಾಕಷ್ಟು ಪ್ರದರ್ಶನ ಕಂಡಿರುವ ಅವರ ರಚನೆಯ “ಪುಕ್ಕಟೆ ಸಲಹೆ’ ನಾಟಕ, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.

ವಿಶ್ವಪಥ ಕಲಾಸಂಸ್ಥೆ (ವಿಕಸಂ) ಪ್ರಸ್ತುತ ಪಡಿಸುತ್ತಿರುವ ಈ ನಾಟಕ ಟಿವಿ ಕಾರ್ಯಕ್ರಮಗಳಲ್ಲಿ ಬರುವ ಜ್ಯೋತಿಷಿಗಳ ಕುರಿತಾಗಿದ್ದು, ಭವಿಷ್ಯ ನುಡಿಯುವವರ ನಾಟಕೀಯತೆಗಳನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ಜೈರಾಮ್‌ ಬೆಂಗಳೂರು, ಫ‌ಲ್ಗುಣಿ ರಾವ್‌, ಮಾಲಾ ಸುಜಿತ್‌ ಶೆಟ್ಟಿ, ಅಶೋಕ್‌ ಗೌಡ, ಸಿದ್ದರಾಮ ಶಿವು, ಅಕ್ಷತಾ ಎ.ಬಿ., ಅರ್ಪಿತಾ ರವಿತೇಜ, ವಿನೋದ್‌ ಪಟ್ಟಣಶೆಟ್ಟಿ ತಾರಾಗಣದಲ್ಲಿದ್ದಾರೆ. ನಿರ್ದೇಶಕ ಬಿ. ಅಶೋಕ್‌ ಅವರ ಮಾತಿನ ಮೋಡಿಗೆ ಗೊಳ್ಳೆನ್ನುವ ಸರದಿ ಪ್ರೇಕ್ಷಕರದು.
 

Advertisement

Udayavani is now on Telegram. Click here to join our channel and stay updated with the latest news.

Next