Advertisement

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

12:31 AM May 27, 2024 | Team Udayavani |

ಶಿಮ್ಲಾ/ನಹಾನ್‌/ಉನಾ: ದೇವರೇ ತಮ್ಮಿಂದ ಕೆಲಸ ಮಾಡಿಸುತ್ತಿದ್ದಾನೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಾರೆೆ. ಬಹುಶಃ ದೇವರು ಅದಾನಿಗಾಗಿ ಕೆಲಸ ಮಾಡುವಂತೆ ಹೇಳಿರಬೇಕು ಎಂದು ಕಾಂಗ್ರೆಸ್‌ ನಾಯಕ ವ್ಯಂಗ್ಯವಾಡಿದರು. ಅಲ್ಲದೇ ಜತೆಗೆ ದೇಶದ ವಿಮಾನ ನಿಲ್ದಾಣ, ಬಂದರುಗಳನ್ನು ಉದ್ಯಮಿ ಗೌತಮ್‌ ಅದಾನಿ ಯವರಿಗೆ ಮಾರುತ್ತಿದ್ದಾರೆ ಎಂದು ದೂರಿದರು.

Advertisement

ಹಿಮಾಚಲ ಪ್ರದೇಶದ ಶಿಮ್ಲಾ, ನಾಹನ್‌ ಮತ್ತು ಉನಾ ದಲ್ಲಿ ಮಾತನಾಡಿದ ಅವರು, 10 ವರ್ಷಗಳಲ್ಲಿ 22 ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿರುವ ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ಮಳೆ ವಿಕೋಪ ಪರಿಹಾರಕ್ಕೆ 9,000 ಕೋಟಿ ರೂ. ನೀಡುತ್ತಿಲ್ಲ. ಹಿಮಾಚಲ ಪ್ರದೇಶಕ್ಕೆ ನೆರವು ಒದಗಿಸುವ ಬದಲು ಇಲ್ಲಿನ ಸರಕಾರದ ಪತನ ಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದರು. ಕೇಂದ್ರ ಸರಕಾರ ರದ್ದು ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ 700 ಮಂದಿ ರೈತರು ಅಸುನೀಗಿದ್ದರು. ಅವರಿಗೆ ಕೇಂದ್ರ ಸರಕಾರ ಹುತಾತ್ಮರ ಗೌರವ ನೀಡಿಲ್ಲವೆಂದರು.

ಪ್ರಗತಿ ಆಗಿದ್ದರೆ ಜನರ ಜೀವನ ಏಕೆ ಸುಧಾರಣೆ ಆಗಿಲ್ಲ?: ಪ್ರಿಯಾಂಕಾ
ಚಂಡೀಗಢ: ದೇಶದ ಆರ್ಥಿಕ ಪ್ರಗತಿಯಾಗುತ್ತಿ ದ್ದರೂ ಜನರ ಜೀವನ ಮಟ್ಟ ಸುಧಾರಿಸಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಧಾನ ಕಾರ್ಯ ದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ. ಪಂಜಾಬ್‌ನ ಫ‌ತೇಗರ್‌ ಸಾಹೀಬ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿ, ದೇಶ ಪ್ರಗತಿಯಾಗುತ್ತಿದೆ ಎಂದು ಮೋದಿ ಹೇಳು ತ್ತಾರೆ. ಅದು ನಿಜವಾಗಿದ್ದರೆ, ಇಲ್ಲಿನ ಸ್ಟೀಲ್‌ ಕಾರ್ಖಾ ನೆಗಳೇಕೆ ಮುಚ್ಚುತ್ತಿವೆ. ಜಿಎಸ್‌ಟಿ ಹೇರಿಕೆಯಿಂದ ಉದ್ಯಮಗಳನ್ನು ಬಲಹೀನ ಗೊಳಿ ಸಲಾಗುತ್ತಿದೆ. ಜನರ ಜೀವನ ಮಟ್ಟ ಸುಧಾರಣೆಯಾಗಿಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಜನರ ಅಭಿವೃದ್ಧಿ ಆಗುತ್ತಿಲ್ಲ. ಪ್ರಧಾನಿ ಕೇವಲ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂದು ಅವರು ದೂರಿದರು.

ಪಿಎಂ ಮೋದಿ ತಮ್ಮನ್ನು ತೀಸ್‌ ಮಾರ್‌ ಖಾನ್‌ ಅಂದುಕೊಂಡಿದ್ದಾರೆ
ಸಸಾರಾಂ: ಮುಸ್ಲಿಮರ ಮುಂದೆ ಇಂಡಿಯಾ ಕೂಟ “ಮುಜ್ರಾ’ ಮಾಡುತ್ತದೆ ಎಂಬ ಪ್ರಧಾನಿ ಹೇಳಿಕೆ ಬಿಹಾರಕ್ಕೆ ಮಾಡಿದ ಅವಮಾನ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಕಿಡಿ ಕಾರಿ ದ್ದಾರೆ. ಮೋದಿ ತಮ್ಮನ್ನು ತಾವು “ತೀಸ್‌ ಮಾರ್‌ ಖಾನ್‌’ ಎಂದು ಭಾವಿಸಿ ದ್ದಾರೆ ಎಂದೂ ಹೇಳಿದರು. ಬಿಹಾರದ ಸಸಾ ರಾಂನಲ್ಲಿ ಮಾತನಾಡಿದ ಅವರು “ಮೋದಿಯವರು ಮುಜ್ರಾ ಇಲ್ಲಿಯೇ ನಡೆಯುತ್ತದೆ ಎಂಬರ್ಥದಲ್ಲಿ ಮಾತನಾಡುವ ಮೂಲಕ ಬಿಹಾರ ಮತದಾರನ್ನು ಅವಮಾನಿಸಿದ್ದಾರೆ. ಅವರು ತಮ್ಮನ್ನು ತಾವು ತೀಸ್‌ ಮಾರ್‌ ಖಾನ್‌ ಎಂದು ಭಾವಿಸಿಕೊಂಡಿದ್ದಾರೆ. ಅವರ ಭಾವನೆ ತಪ್ಪು. ಜನರೇ ನಿಜವಾದ ತೀಸ್‌ ಮಾರ್‌ ಖಾನ್‌ ಎಂದರು.

ಜೂ.4ರ ಬಳಿಕ ಸರಕಾರ ಜತೆಗೆ ಮಾಧ್ಯಮಗಳೂ ಬದಲು
ಬಲ್ಲಿಯಾ: ಪ್ರಧಾನಿ ಮೋದಿ ಆತ್ಮವಿಶ್ವಾಸ ಕಳೆದು ಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಉಳಿಸಿ ಕೊಳ್ಳುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಅವರು ತಮ್ಮ ಭಾಷಣದಲ್ಲಿ ಏನೇನೋ ಮಾತಾಡಲು ಶುರು ಮಾಡಿದ್ದಾರೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ ಟೀಕಿಸಿದ್ದಾರೆ. ಉ.ಪ್ರ.ದ ಬಲ್ಲಿಯಾದಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಜೂ.4ರಂದು ಫ‌ಲಿತಾಂಶ ಬಂದ ಬಳಿಕ, ಕೇಂದ್ರ ಸಂಪುಟವೂ ಬದಲಾಗುತ್ತದೆ, ಮಾಧ್ಯಮಗಳೂ ಬದಲಾಗುತ್ತವೆ ಎಂದಿದ್ದಾರೆ. ಯಾವಾಗ ಆತ್ಮವಿಶ್ವಾಸ ಕಳೆದುಕೊಳ್ಳುತ್ತೇವೋ, ಆಗ ಮಾತುಗಳು ಅಸ್ಪಷ್ಟ ವಾಗುತ್ತವೆ. ಅದನ್ನು ಪ್ರಧಾನಿ ಭಾಷಣದಲ್ಲಿ ಕಾಣ ಬಹುದು. ದೇಶದ 140 ಕೋಟಿ ಜನರು ಬಿಜೆಪಿಗೆ 140 ಸೀಟುಗಳಿಗೂ ಕಷ್ಟಪಡುವಂತೆ ಮಾಡಲಿದ್ದಾರೆ ಎಂದೂ ಅಖೀಲೇಶ್‌ ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next