Advertisement

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

12:51 PM May 13, 2024 | Team Udayavani |

ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತಿಲ್ಲ ಎಂದು ಇಡೀ ಚಿತ್ರರಂಗ ಬೇಸರದಲ್ಲಿರುವಾಗಲೇ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಲು ಆರಂಭಿಸಿವೆ. ಆದರೆ, ಹೊಸದಲ್ಲ, ಹಳೆಯದು!

Advertisement

ಹೌದು, ಸ್ಟಾರ್‌ಗಳ ಹೊಸ ಚಿತ್ರಗಳು ತೆರೆಕಂಡು ಕನ್ನಡ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಚಿತ್ರೋದ್ಯಮಕ್ಕೆ ಒಂದು ಹೆಸರು ತಂದುಕೊಡಬೇಕಿತ್ತು. ಆದರೆ, ಯಾವುದೇ ಸ್ಟಾರ್‌ ನಟರ ಸಿನಿಮಾಗಳು ಸದ್ಯದಲ್ಲಿ ರಿಲೀಸ್‌ ಆಗುವ ಮುನ್ಸೂಚನೆಯಂತೂ ಕೊಟ್ಟಿಲ್ಲ. ಇದೇ ಕಾರಣದಿಂದ ಸ್ಟಾರ್‌ಗಳ ಹಳೆಯ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ.

ಈಗಾಗಲೇ ಪುನೀತ್‌ ರಾಜ್‌ ಕುಮಾರ್‌ ಅವರ “ಜಾಕಿ’ ಚಿತ್ರ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿ ಮತ್ತೂಮ್ಮೆ ಹಿಟ್‌ ಆಗಿತ್ತು. ಚಿತ್ರ ಭರ್ಜರಿ ಓಪನಿಂಗ್‌ ಪಡೆದುಕೊಳ್ಳುವ ಜೊತೆಗೆ ಕಲೆಕ್ಷನ್‌ ವಿಷಯದಲ್ಲೂ ಸದ್ದು ಮಾಡಿತು. ಈಗ ಬೇರೆ ಬೇರೆ ಸ್ಟಾರ್‌ ಗಳ ಸಿನಿಮಾ ಗಳು ಮರುಬಿಡುಗಡೆಗೆ ಸಿದ್ಧವಾಗಿವೆ. ಸದ್ಯ ಚಿತ್ರಮಂದಿರಗಳು ಕೂಡಾ ಸುಲಭವಾಗಿ ಸಿಗುತ್ತಿವೆ. ಈ ಕಾರಣದಿಂದ ಸ್ಟಾರ್‌ಗಳ ಹಳೆಯ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಚಿತ್ರಮಂದಿರದತ್ತ “ಎ’

ಉಪೇಂದ್ರ ನಿರ್ದೇಶನದ ಜೊತೆಗೆ ನಾಯಕರಾಗಿರುವ “ಎ’ ಚಿತ್ರ 1998ರಲ್ಲಿ ತೆರೆಕಂಡು ದೊಡ್ಡ ಹಿಟ್‌ ಆಗಿತ್ತು. ಚಿತ್ರದ ಕಥೆಯ ಜೊತೆಗೆ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದ್ದವು. ಅಂದಿನ ಕಾಲಕ್ಕೆ ಆ ಚಿತ್ರ ಹೊಸ ಕಾನ್ಸೆಪ್ಟ್ನಿಂದ ಸಿನಿಪ್ರೇಮಿಗಳ ಹುಬ್ಬೇರಿಸಿದ್ದು ಸುಳ್ಳಲ್ಲ. ಈಗ ಮತ್ತೂಮ್ಮೆ “ಎ’ ಚಿತ್ರ ರೀ ರಿಲೀಸ್‌ ಆಗುತ್ತಿದೆ. ಮೇ 17ರಂದು ಚಿತ್ರವನ್ನು ರಿಲೀಸ್‌ ಮಾಡಲಾಗುತ್ತಿದ್ದು, ಈ ಬಾರಿ ಪ್ರೇಕ್ಷಕನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕುತೂಹಲವಿದೆ.

Advertisement

ಒಂದೇ ದಿನ ಎರಡು ಚಿತ್ರ, ಪುನೀತ್‌ ಫ್ಯಾನ್ಸ್‌ ಬೇಸರ

ಪುನೀತ್‌ ರಾಜ್‌ಕುಮಾರ್‌ “ಜಾಕಿ’ ಚಿತ್ರ ರೀ ರಿಲೀಸ್‌ನಲ್ಲೂ ಹಿಟ್‌ ಆದ ಬಳಿಕ ಅವರ ಹಳೆಯ ಸಿನಿಮಾಗಳನ್ನು ಮರುಬಿಡುಗಡೆ ಮಾಡಲು ನಿರ್ಮಾಪಕರು

ಮುಂದಾಗಿದ್ದಾರೆ. ಅದರ ಮೊದಲ ಹಂತವಾಗಿ ಮೇ 10ರಂದು ಪುನೀತ್‌ ಅವರ ಎರಡು ಚಿತ್ರಗಳನ್ನು ಒಂದೇ ದಿನ ರಿಲೀಸ್‌ ಮಾಡಲಾಗಿದೆ. “ಅಂಜನಿಪುತ್ರ’ ಹಾಗೂ “ಪವರ್‌’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದು, ಯಾವ ಚಿತ್ರಕ್ಕೂ ಅಭಿಮಾನಿಗಳಿಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಎರಡೂ ತಂಡಗಳು ಜಿದ್ದಿಗೆ ಬಿದ್ದವರಂತೆ ರಿಲೀಸ್‌ ಮಾಡಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

ಜೂನ್‌ನಲ್ಲೂ ಸ್ಟಾರ್‌ ಸಿನಿಮಾಗಳು ಡೌಟ್‌

ಚುನಾವಣಾ ಬಿಸಿ ತಣಗಾಗಿದೆ, ಇನ್ನಾದರೂ ಸ್ಟಾರ್‌ ಸಿನಿಮಾಗಳು ರಿಲೀಸ್‌ಗೆ ಮನಸ್ಸು ಮಾಡಬಹುದಲ್ವಾ ಎಂದು ಅಭಿಮಾನಿಗಳು ಮಾತನಾಡಿ ಕೊಳ್ಳುತ್ತಿದ್ದಾರೆ. ಆದರೆ, ಜೂನ್‌ನಲ್ಲಿ ಯಾವ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತಿಲ್ಲ ಎಂಬುದು ಗಾಂಧಿನಗರದ ಸಿನಿಪಂಡಿತರ ಮಾತು.

ಜೂನ್‌ ಮೊದಲ ವಾರ ಚುನಾವಣಾ ಫ‌ಲಿತಾಂಶ ಬರಲಿದೆ. ಜನರ ಮೂಡ್‌ ಕೂಡಾ ಸ್ವಲ್ಪ ದಿನ ಆ ಕಡೆಗೆ ಇರುತ್ತದೆ ಎಂಬುದು ಒಂದು ಕಾರಣವಾದರೆ, ಜೂನ್‌ನಲ್ಲಿ ಬರುತ್ತೇವೆ ಎಂದು ಹೇಳಿಕೊಂಡಿರುವ ಕೆಲವು ಸ್ಟಾರ್‌ಗಳ ಚಿತ್ರದ ಸಾಕಷ್ಟು ಕೆಲಸಗಳು ಬಾಕಿ ಇವೆ ಎನ್ನಲಾಗಿದೆ. ಜೊತೆಗೆ ಜೂನ್‌ ತುಂಬಾ ಹೊಸಬರ ಸಿನಿಮಾಗಳ ಮೆರವಣಿಗೆ ಜೋರಾಗಿ ಸಾಗಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next