Advertisement

ಡುಂಡಿರಾಮ್ಸ್‌ ಲಿಮರಿಕ್ಸ್‌ ಕೃತಿ ಬಿಡುಗಡೆ

11:18 AM Oct 10, 2021 | Team Udayavani |

ಬೆಂಗಳೂರು: ಹಾಸ್ಯ ಸಾಹಿತಿ ಡುಂಡಿರಾಜ್‌ ಹಾಗೂ ಎನ್‌.ರಾಮನಾಥ್‌ ಅವರ ಚುಟುಕು ಜುಗಲ್‌ ಬಂದಿ””ಡುಂಡಿರಾಮ್ಸ್‌ ಲಿಮರಿಕ್ಸ್‌ “” ಸೇರಿದಂತೆ ಮೂರು ಕೃತಿಗಳನ್ನು ಶನಿವಾರ ಬಿಡುಗಡೆಗೊಳಿಸಲಾಯಿತು. ಶನಿವಾರ ಎನ್‌. ಆರ್‌.ಕಾಲೋನಿಯ ಅಶ್ವತ್ಥ್ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಬಿ.ಆರ್‌. ಲಕ್ಷ್ಮಣ್‌ ರಾವ್‌ ಅವರು ಡುಂಡಿರಾಜ್‌ ಅವರ ಮಕ್ಕಳ ಕವಿತೆ “”ಲಾಲಿಪಾಪು ಚೀಪು ಚೀಪು”ಮತ್ತು ಎನ್‌.ರಾಮನಾಥ ಅವರ “”ಹಸಿರು ಬಾಗಿಲು” ಅನುವಾದ ಕತೆಗನ್ನು ಲೋಕಾರ್ಪಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ರಾವ್‌, ಮಕ್ಕಳ ಕವಿತೆಗಳನ್ನು ಬರೆಯುವುದು ಸುಲಭದ ಮಾತಲ್ಲ. ಮಕ್ಕಳ ಕವಿತೆಯನ್ನು ಬರೆಯುವಾಗ ಮಕ್ಕಳ ರೀತಿಯಲ್ಲೇ ಇರಬೇಕಾಗುತ್ತದೆ. ಹಾಸ್ಯ ಸಾಹಿತಿ ಡುಂಡಿರಾಜ್‌ಅವರು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲೆ ಕವಿತೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಡುಂಡಿರಾಜ್‌ ಅವರು ಹಾಸ್ಯಕವಿತೆಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರು.ಅವರು ಕವಿತೆಗಳ ಸಾಲಿನಲ್ಲಿ ಹಲವು ಅರ್ಥಗಳಿರುತ್ತವೆ.ಮಕ್ಕಳ ಕವಿತೆಗಳು ಕೂಡ ಸೊಗಸಾಗಿ ಮೂಡಿ ಬಂದಿವೆ.

ಇದನ್ನೂ ಓದಿ:- ಕಾನ್‌ಸ್ಟೇಬಲ್‌, ಪಿಎಸ್‌ಐ ಪಾರದರ್ಶಕ ನೇಮಕ

ಎಂದು ಹೇಳಿದರು. ಡುಂಡಿರಾಜ್‌ ಅವರಿಗೆ ತಮ್ಮದೇ ಆದ ಶೈಲಿಯಿದೆ.ಎನ್‌.ರಾಮನಾಥ್‌ ಅವರು ರಚಿಸಿರುವ ಕವಿತೆಗಳು ಟಿ.ಪಿ.ಕೈಲಾಸಂ ಅವರ ಶೈಲಿಯಲ್ಲಿವೆ. ಹಸಿರು ಬಾಗಿಲು ಅನುವಾದ ಸಾಹಿತ್ಯ ಓದುಗರನ್ನು ಸೆಳೆಯುತ್ತದೆ ಎಂದು ತಿಳಿಸಿದರು. ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್‌, ಪತ್ರಕರ್ತ ಜೋಗಿ, ಹಾಸ್ಯ ಸಾಹಿತಿ ಎಚ್‌. ಡುಂಡಿರಾಜ್‌, ಎನ್‌.ರಾಮನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next