Advertisement

ನಕಲಿ ಅಂಕಪಟ್ಟಿ ದಂಧೆ: ನಾಲ್ವರು ವಶಕ್ಕೆ

10:10 AM Nov 29, 2021 | Team Udayavani |

ಬೆಂಗಳೂರು: ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಸಾಮಾಜಿಕ ಕಾರ್ಯಯಕರ್ತ ಎಚ್‌.ಎಸ್‌. ಮನುಕುಮಾರ್‌ ಎಂಬವರು ವಿಡಿಯೋ ಸಮೇತ ದೂರು ನೀಡಿದ ಮೇರೆಗೆ ರಾಕೇಶ್‌, ಕೃಷ್ಣ ಮತ್ತು ಹೈದರ್‌ ಅಲಿ ಹಾಗೂ ಡಿ. ತನಮ್‌ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಆರೋಪಿಗಳು ಹೆಬ್ಟಾಳದ ಕೆಂಪಾಪುರ ದಲ್ಲಿ ಡ್ರೀಮ್‌ ಎಜ್ಯುಕೇಷನ್‌ ಸರ್ವೀಸ್‌ ಹೆಸರಿನಲ್ಲಿ ಕಚೇರಿ ತೆರೆದಿದ್ದು, ದೇಶದ ನಾನಾ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪ್ರಮುಖವಾಗಿ ಅರನಿ ವಿಶ್ವವಿದ್ಯಾಲಯ, ಕಳಿಂಗ ವಿಶ್ವವಿದ್ಯಾಲಯ, ಐಇಸಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳು ಸಿದ್ಧಪಡಿಸಿ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಉನ್ನತ ವ್ಯಾಸಂಗ ಪೂರ್ಣಗೊಳಿಸಲು ನೆರವು ನೀಡುವುದಾಗಿ ಹೇಳಿ ಆರೋಪಿಗಳು ಸಾಮಾ ಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದರು.

ಇದನ್ನೂ ಓದಿ:- ವರ್ಕ್‌ ಫ್ರಂ ಹೋಮ್‌ಗೆ ವಿದಾಯ

ಅದನ್ನು ಗಮನಿಸುತ್ತಿದ್ದ ಯುವಜನತೆ, ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು. ಕಾಲೇಜಿಗೆ ಪ್ರವೇಶ ಪಡೆದ ನಂತರ, ತರಗತಿಗಳಿಗೆ ಹಾಜರಾಗಬೇಕು. ನಂತರ, ಪರೀಕ್ಷೆ ಬರೆಯಬೇಕು. ನಂತರವೇ ಅಂಕಪಟ್ಟಿ ಸಿಗುತ್ತದೆ. ಅದರ ಬದಲು ಹಣ ಕೊಟ್ಟರೆ, ಪರೀಕ್ಷೆ ಇಲ್ಲದೇ ಕೆಲವೇ ದಿನಗಳಲ್ಲಿ ಅಂಕಪಟ್ಟಿ ಕೊಡುತ್ತೇವೆ ಎಂದು ಆರೋಪಿ ಗಳು ನಂಬಿಸುತ್ತಿದ್ದರು.

Advertisement

ಈ ಮೂಲಕ ಅಂಕ ಪಟ್ಟಿ ಪಡೆದ ಕೆಲವರು ದೇಶದ ವಿವಿಧೆಡೆ ಸರ್ಕಾರಿ ಹಾಗೂ ಖಾಸಗಿ ಕೆಲಸ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಿ ಅಂಕಪಟ್ಟಿಗೆ 47-50 ಸಾವಿರ ರೂ.ಗೆ ಬೇಡಿಕೆ ಇಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next