Advertisement
ಕಳೆದ ಸಲವೂ ಈ ಎರಡು ತಂಡಗಳೇ ಫೈನಲ್‌ನಲ್ಲಿ ಸೆಣಸಿದ್ದವು. ಕೊಯಮತ್ತೂರಿ ನಲ್ಲಿ ನಡೆದ ಮುಖಾಮುಖೀಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ 294 ರನ್ನುಗಳ ಭಾರೀ ಅಂತರದಿಂದ ಗೆದ್ದಿತ್ತು. 34 ಫೈನಲ್‌ಗಳಲ್ಲಿ ತನ್ನ ಪ್ರಶಸ್ತಿಗಳ ದಾಖಲೆಯನ್ನು 19ಕ್ಕೆ ವಿಸ್ತರಿಸಿತ್ತು. ಈ ಬಾರಿ ಅಜಿಂಕ್ಯ ರಹಾನೆ ಇಲ್ಲ. ಪ್ರಿಯಾಂಕ್ ಪಾಂಚಾಲ್ ಪಶ್ಚಿಮ ವಲಯವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಸಲಈ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವೊಂದು ಹನುಮ ವಿಹಾರಿ ಪಡೆಗೆ ಎದುರಾಗಿದೆ.ವೈಯಕ್ತಿಕ ಸಾಧನೆಯ ದೃಷ್ಟಿಯಿಂದಲೂ ಕೆಲವರಿಗೆ ಇದು ಮಹತ್ವದ ಪಂದ್ಯವಾಗಿದೆ. ಇಲ್ಲಿ ಕಾಣಿಸಿಕೊಳ್ಳುವ ಮುಖ್ಯ ಹೆಸರು ಚೇತೇಶ್ವರ್ ಪೂಜಾರ ಅವರದು.
ಪಶ್ಚಿಮ ವಲಯದ ಪೃಥ್ವಿ ಶಾ, ದಕ್ಷಿಣ ವಲಯದ ಉಪನಾಯಕ ಮಾಯಾಂಕ್ ಅಗರ್ವಾಲ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆಲ್ಲ ಕಮ್‌ಬ್ಯಾಕ್ ಮಾಡಲು ಈ ಫೈನಲ್ ಮಹತ್ವದ್ದಾಗಲಿದೆ. 2022ರ ಬರ್ಮಿಂಗ್‌ಹ್ಯಾಮ್ ಪಂದ್ಯದ ಬಳಿಕ ಟೆಸ್ಟ್ ಆಡದ ಹನುಮ ವಿಹಾರಿಗೂ ಇಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. ಪ್ರತಿಭಾನ್ವಿತರ ವಿಚಾರದತ್ತ ಬರುವು ದಾದರೆ ಎನ್. ತಿಲಕ್ ವರ್ಮ, ಬಿ. ಸಾಯಿ ಸುದರ್ಶನ್, ಆರ್. ಸಾಯಿ ಕಿಶೋರ್, ಕರ್ನಾಟಕದ ಬೌಲಿಂಗ್ ಹೀರೋಗ ಳಾದ ವೈಶಾಖ್ ವಿಜಯ್‌ಕುಮಾರ್, ವಿದ್ವತ್ ಕಾವೇರಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ತಿಲಕ್ ವರ್ಮ ವೆಸ್ಟ್ ಇಂಡೀಸ್ ಎದುರಿನ ಸರಣಿಗಾಗಿ ಈಗಾಗಲೇ ಟೀಮ್ ಇಂಡಿಯಾ ಪ್ರವೇಶಿಸಿದ್ದಾರೆ. ಉಳಿದವರಿಗೆ ಇಲ್ಲಿ ಅದೃಷ್ಟಪರೀಕ್ಷೆ ಕಾದಿದೆ.