Advertisement

Duleep Trophy: ಭಾರತ ‘ಬಿ’ಗೆ ಮುಶೀರ್‌ ನೆರವು

12:19 AM Sep 06, 2024 | Team Udayavani |

ಬೆಂಗಳೂರು:ಮುಶೀರ್‌ ಖಾನ್‌ ಅವರ ಅಜೇಯ ಶತಕದ ನೆರವಿನಿಂದ ಭಾರತ “ಬಿ’ ತಂಡವು ದುಲೀಪ್‌ ಟ್ರೋಫಿಗಾಗಿ ನಡೆಯುತ್ತಿರುವ ನಾಲ್ಕು ದಿನಗಳ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಭಾರತ “ಎ’ ತಂಡದೆದುರು ಮೊದಲ ದಿನ 7 ವಿಕೆಟಿಗೆ 202 ರನ್ನುಗಳ ಸಾಧಾರಣ ಮೊತ್ತ ಪೇರಿಸಿದೆ.

Advertisement

ಒಂದು ಹಂತದಲ್ಲಿ 94 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ಮುಶೀರ್‌ ಖಾನ್‌ ಆಧರಿಸಿದರು. ಅವರು ನವದೀಪ್‌ ಸೈನಿ ಅವರೊಂದಿಗೆ ಮುರಿಯದ 8ನೇ ವಿಕೆಟಿಗೆ ಈಗಾಗಲೇ 108 ರನ್‌ ಪೇರಿಸಿದ್ದಾರೆ.

ಭಾರತ “ಡಿ’ 164 ಆಲೌಟ್‌
ಅನಂತಪುರದಲ್ಲಿ ಸಾಗುತ್ತಿರುವ ಪಂದ್ಯದಲ್ಲಿ ಭಾರತ “ಸಿ’ ತಂಡದೆದುರು ಭಾರತ “ಡಿ’ ತಂಡವು ಕೇವಲ 164 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ಭಾರತ “ಸಿ’ ತಂಡವು ನಾಲ್ಕು ವಿಕೆಟಿಗೆ 91 ರನ್‌ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next