Advertisement

ಕಾರ್ಯಕರ್ತ ಪರಿಶ್ರಮ ಸಂಘಟನೆಯ ಯಶಸ್ಸಿಗೆ ಕಾರಣ

11:20 AM Mar 28, 2017 | |

ನಗರ: ದಲಿತ್‌ ಸೇವಾ ಸಮಿತಿ ಸಂಘಟನೆ ಆರಂಭಿಸಿದಾಗ ಬೆರಳೆಣಿಕೆ ಸದಸ್ಯರಿದ್ದರು. ಈಗ ಜಿಲ್ಲಾ ಮಟ್ಟದಲ್ಲಿ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿದೆ. ಕಾರ್ಯಕರ್ತರ ಅವಿರತ ಪರಿಶ್ರಮವೇ ಸಂಘಟನೆಯ ಬೆಳವಣಿಗೆಗೆ ಕಾರಣ ಎಂದು ದ.ಕ. ಜಿಲ್ಲಾ ದಲಿತ್‌ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಹೇಳಿದರು.

Advertisement

ಪುರಭವನದಲ್ಲಿ ದ.ಕ. ಜಿಲ್ಲಾ ದಲಿತ್‌ ಸೇವಾ ಸಮಿತಿ ಪುತ್ತೂರು ತಾಲೂಕು ಸಮಿತಿಯ 3ನೇ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ, ಸಮುದಾಯದ ಜನರಿಗೆ ತೊಂದರೆ ಆದಾಗ, ಕಾನೂನಿನ ಪರಿಮಿತಿ ಯೊಳಗೆ ಹೋರಾಟ ಮಾಡಬೇಕು. ನ್ಯಾಯ ಮಾರ್ಗದಲ್ಲಿ ಹೋರಾಟ ನಡೆಸಿ ದರೆ, ಸಂಘಟನೆಯು ಬೆಳೆಯುತ್ತದೆ. ಸಮಾಜಕ್ಕೂ ಒಳಿತಾಗುತ್ತದೆ ಎಂದರು.

ದೌರ್ಜನ್ಯದ ವಿರುದ್ಧ ಹೋರಾಟ
ಸಭಾ ಅಧ್ಯಕ್ಷತೆ ವಹಿಸಿದ್ದ ದಲಿತ್‌ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕ ಮಾತನಾಡಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ವಿಚಾರಧಾರೆಯನ್ನು ಇಟ್ಟುಕೊಂಡು, ಸಮಾಜದ ಏಳಿಗಾಗಿ ಹೋರಾಟ ನಡೆಸುತ್ತಿದ್ದೇವೆ. ದಲಿತರ ಮೇಲಿನ ಶೋಷಣೆ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಸಂಘಟನೆಯ ಮೂಲಕ ನಡೆಯಲಿದೆ ಎಂದರು.

ಕಾಲನಿಗಳಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳುವ ಉದ್ದೇಶ ಹೊಂದಲಾಗಿದೆ. ಸ್ವತ್ಛತೆ ತೋರಿಕೆಗೆ ಇರದೇ, ಅದು ನೈಜ ರೂಪದಲ್ಲಿ ಮಾಡಿ ತೋರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ದಲಿತ್‌ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚಂದ್ರಾವತಿ ಎಂ. ಮಾಣಿಲ ಮಾತನಾಡಿ, ದಲಿತ ಸಂಘಟನೆ ಯಲ್ಲಿ ಮಹಿಳಾ ಸಂಘಟನೆ ಬಲಶಾಲಿ ಯಾಗಬೇಕಿದೆ. ಅದಕ್ಕಾಗಿ ತಾಲೂಕಿನಲ್ಲಿ ಸಂಘಟನೆಯ ನೇತೃತ್ವ ವಹಿಸಿಕೊಳ್ಳಲು ಮುಂದೆ ಬರಬೇಕು ಎಂದರು.

ನಂದಕುಮಾರ್‌ ಮಾತನಾಡಿ, ಸಂಪಾ ದನೆಯ ಒಂದು ಭಾಗವನ್ನು ಸಮಾ ಜಕ್ಕೆ ಮೀಸಲಿಡುವ ಗುಣ ನಮ್ಮಲ್ಲಿ ಇರಬೇಕು. ನಿರ್ಗತಿಕರ ಉದ್ಧಾರಕ್ಕಾಗಿ ಕಿಂಚಿತ್‌ ಸೇವೆ ಮಾಡಬೇಕು. ಸಂಸ್ಕಾರಯುತ ಬದುಕು ನಮ್ಮದಾಗಬೇಕು ಎಂದು ಹೇಳಿದರು.

Advertisement

ಗೌರವಾರ್ಪಣೆ
ದಲಿತ್‌ ಸೇವಾ ಸಮಿತಿ ಆಲಂಕಾರು ಗ್ರಾಮ ಸಮಿತಿ ಕಾರ್ಯದರ್ಶಿ ಹರ್ಷಿತಾ ನಗ್ರಿ ಅವರಿಗೆ ಸಂಘಟನೆಯ ಗುರುತಿನ ಚೀಟಿ ನೀಡಲಾಯಿತು. ವಿವಿಧ ರೀತಿಯಲ್ಲಿ ಸಹಕರಿಸಿದ  ಸುರೇಶ್‌, ವಿಟಲ, ಸುರೇಂದ್ರ, ಧನಂಜಯ, ಅನಿಲ್‌ ನಾಯ್ಕ, ಜಯ ರಾಮ, ಹರೀಶ್‌ ನಾಯ್ಕ, ಉಮೇಶ್‌ ತ್ಯಾಗರಾಜ, ಪ್ರಮೋದ್‌ ತಿಂಗಳಾಡಿ, ಆಶಾಲತಾ ಸೊರಕೆ, ಬ್ರಹ್ಮನಗರ ಕಾಲ ನಿಯ ಮಾರಿಯಮ್ಮ ಸೇವಾ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

ನಗರ ಪೊಲೀಸ್‌ ಠಾಣೆಯ ಉಪ ನಿರೀಕ್ಷಕಿ ಒಮನ ಮತ್ತಿತರರು ಉಪಸ್ಥಿತ ರಿದ್ದರು. ಅಖೀಲಾ ತಿಂಗಳಾಡಿ ಪ್ರಾರ್ಥಿಸಿ, ಪ್ರಮೋದ್‌ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಟಲ ನಾಯಕ್‌ ಮತ್ತು ಬಳಗದವರಿಂದ  ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ದರ್ಬೆಯಿಂದ ಪುರಭವನದ ತನಕ ಕಾಲ್ನಡಿಗೆ ಜಾಥಾ ನಡೆಯಿತು.

ದುರ್ಬಳಕೆ ತಡೆಯಬೇಕು
ಮಾಹಿತಿ ಹಕ್ಕು ಹೋರಾಟಗಾರ ಬಾಲಚಂದ್ರ ಸೊರಕೆ ಮಾತನಾಡಿ, ದಲಿತ ಪದದ ದುರ್ಬಳಕೆ ಮಾಡುವ ಹುನ್ನಾರ ನಡೆಯುತ್ತಿದೆ. ಈ ಹಿಂದೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು ಸರಕಾರಿ ಕೆಲಸಕ್ಕಾಗಿ ದಲಿತರೆಂದು ಸುಳ್ಳು ಪ್ರಮಾಣ ಪತ್ರ ಪಡೆದಿರುವುದು ಇದೆ. ಪ್ರಕರಣ ಬಯಲಾಗುವ ಹೆದರಿಕೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇಂತಹ ನೂರಾರು ಉದಾಹರಣೆಗಳಿದ್ದು, ದಲಿತ ಸಮುದಾಯ ಜಾಗೃತಿಗೊಂಡು ದುರ್ಬಳಕೆ ತಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next