Advertisement
ಕರಾವಳಿಯಾದ್ಯಂತ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡವರಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರೇ ಹೆಚ್ಚಿದ್ದರು. ಶ್ರಮ ಹಾಕಿ ದುಡಿಯುವ ಜಾಯಮಾನ, ಸ್ಥಳೀಯ ಕಾರ್ಮಿಕರ ಕೊರತೆ ಅವರ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದೆ. ಮಂಗಳೂರಿನಲ್ಲೂ ಪ. ಬಂಗಾಲದ ಕಾರ್ಮಿಕರು, ಮೇಸ್ತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲಾಕ್‌ಡೌನ್ ಸಂದರ್ಭ ಸರಕಾರ ಊರಿಗೆ ತೆರಳಲು ಅವಕಾಶ ನೀಡಿದಾಗ ಇವರೆಲ್ಲ ಹೋಗಿ ದ್ದರು. ಕೋವಿಡ್ ಕಡಿಮೆಯಾಗಿ ಸ್ವಲ್ಪ ದಿನ ಬಿಟ್ಟು ಕಾರ್ಮಿಕರು ಮತ್ತೆ ಬರಬಹುದು ಎಂಬ ನಿರೀಕ್ಷೆ ಬಿಲ್ಡರ್‌ಗಳಲ್ಲಿದ್ದರೂ ಹಾಗಾಗಿಲ್ಲ. ಅನಿವಾರ್ಯವಾಗಿ ಈಗ ಬಿಲ್ಡರ್‌ಗಳೇ ಸ್ವತಃ ಸಂಚಾರ ವ್ಯವಸ್ಥೆ ಮಾಡಿ ಕಾರ್ಮಿಕರು, ಮೇಸ್ತ್ರಿಗಳನ್ನು ಕರೆತರಲು ಮುಂದಾಗಿದ್ದಾರೆ. ಇನ್ನು ಕೆಲವು ಮಂದಿ ಬಿಲ್ಡರ್‌ಗಳು ಕಾರ್ಮಿಕರ ನಿರೀಕ್ಷೆಯಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ಕೋಲ್ಕೊತಾ ದಿಂದ ವಿಮಾನ ಮೂಲಕ ಐವರು ಮೇಸ್ತ್ರಿಗಳನ್ನು ಕರೆತರಲಾಗಿದೆ. ಟಿಕೆಟ್ ವೆಚ್ಚ ತಲಾ 7,500 ರೂ.ಗಳನ್ನು ಬಿಲ್ಡರ್ ಭರಿಸಿದ್ದಾರೆ. ನಿಯಮದಂತೆ ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಅದರ ವೆಚ್ಚವನ್ನೂ ಬಿಲ್ಡರ್ ನೋಡಿಕೊಳ್ಳುತ್ತಿದ್ದಾರೆ. ಹಲವು ಕಟ್ಟಡಗಳು ಮುಕ್ತಾಯ ಹಂತಕ್ಕೆ ಬಂದಿರುವುದರಿಂದ ಅವುಗಳ ಮೇಲ್ವಿಚಾರಣೆ ವಹಿಸಿದ್ದ ಮೇಸ್ತ್ರಿಗಳೇ ಪೂರ್ಣಗೊಳಿಸಲು ಅಗತ್ಯವಿದ್ದು, ಹೀಗಾಗಿ ತುರ್ತಾಗಿ ಕರೆತರಲಾಗಿದೆ ಎಂದು ಬಿಲ್ಡರ್ ಕಡೆಯ ಮೂಲಗಳು ತಿಳಿಸಿವೆ. ವಾಪಸಾಗದ ಉ.ಕ. ಕಾರ್ಮಿಕರು
ಪ್ರತೀ ವರ್ಷವೂ ಮಳೆಗಾಲ ಸಂದರ್ಭ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮೂರಿಗೆ ಕೃಷಿ ಕೆಲಸಕ್ಕಾಗಿ ವಾಪಸಾಗುತ್ತಾರೆ. ಆದರೂ ಸುಮಾರು ಶೇ.40ರಷ್ಟು ಮಂದಿ ಇಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಬಹುತೇಕರು ಊರಿಗೆ ತೆರಳಿದ್ದು, ಹಿಂದೆ ಬಂದಿಲ್ಲ. ಹಾಗಾಗಿ ಉತ್ತರ ಭಾರತದ ಕಾರ್ಮಿಕರನ್ನೇ ಕರೆಸಲು ಬಿಲ್ಡರ್‌ಗಳು ಮುಂದಾಗಿದ್ದಾರೆ.
Related Articles
ಪ. ಬಂಗಾಲದಿಂದ ಬಸ್ ಮೂಲಕ ಕಾರ್ಮಿಕರನ್ನು ಕರೆ ತರಲು ಯೋಜನೆ ಹಾಕಿಕೊಳ್ಳಲಾಗಿದ್ದು, ಜಿಲ್ಲಾಡಳಿತದ ಅನುಮತಿ ಕೇಳಲಾಗಿದೆ. ಒಂದು ಬಸ್‌ನಲ್ಲಿ 30 ಜನ ಕಾರ್ಮಿಕರಂತೆ ಸಾಧ್ಯವಾದಷ್ಟು ಮಂದಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಮಂಗಳೂರಿನಿಂದ ಪ. ಬಂಗಾಲಕ್ಕೆ ಹೋಗಿ ಬರುವುದು ಸುಮಾರು 5 ಸಾವಿರ ಕಿ.ಮೀ.ಗಳ ಪ್ರಯಾಣ. ಒಬ್ಬ ಕಾರ್ಮಿಕನ ಮೇಲೆ 5ರಿಂದ 6 ಸಾವಿರ ರೂ. ವೆಚ್ಚವಾಗಲಿದೆ. ಆದರೂ ಇದು ಅನಿವಾರ್ಯ ಎನ್ನುತ್ತಾರೆ ಬಿಲ್ಡರ್‌ಗಳು.
Advertisement
ಪ. ಬಂಗಾಲ ಕಾರ್ಮಿಕರಿಂದ ಕರೆಪ. ಬಂಗಾಲದ ಕಾರ್ಮಿಕರು ಸ್ವತಃ ಆಸಕ್ತಿ ತೋರಿ ಕರೆ ಮಾಡುತ್ತಿದ್ದಾರೆ. ನಿರ್ಮಾಣ ಕ್ಷೇತ್ರ ಈಗಾಗಲೇ ಮರಳು ಸಮಸ್ಯೆಯಿಂದಾಗಿ ಸಂಕಷ್ಟ ದಲ್ಲಿದೆ. ಸರಕಾರವೂ ನಿರ್ಲಕ್ಷ್ಯ ವಹಿಸಿದೆ. ನಾವು ಕಾರ್ಮಿಕರನ್ನು ಒತ್ತಾಯಿಸುವುದಿಲ್ಲ. ಎಲ್ಲರ ಸುರಕ್ಷತೆಯೂ ಅಗತ್ಯ.
-ನವೀನ್ ಕಾಡೋìಜಾ, ಅಧ್ಯಕ್ಷರು, ಕ್ರೆಡಾೖ ಮಂಗಳೂರು ಕ್ವಾರಂಟೈನ್ ಕಡ್ಡಾಯ
ಕಾರ್ಮಿಕರನ್ನು ಸರಕಾರದ ಆದೇಶದಂತೆ ಉಚಿತವಾಗಿ ಅವರ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಮಂಗಳೂರಿಗೆ ವಾಪಸಾಗುವ ಕಾರ್ಮಿಕರಿಗೆ ಇಲಾಖೆಯಿಂದ ನಿರ್ಬಂಧವಿಲ್ಲ. ಆದರೆ ಬೇರೆ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ.
-ನಾಗರಾಜ್, ಕಾರ್ಮಿಕ ಅಧಿಕಾರಿ, ದ.ಕ. ಜಿಲ್ಲೆ