Advertisement

ಗುಳೆ ತಪ್ಪಿಸಲು ದುಡಿಯೋಣ ಬಾ

12:29 PM Mar 18, 2021 | Team Udayavani |

ಬೈಲಹೊಂಗಲ: ದುಡಿಯೋಣ ಬಾ ಅಭಿಯಾನಕ್ಕೆ ಎಲ್ಲ ಗ್ರಾಮೀಣ ಜನರುಕೈಜೋಡಿಸಬೇಕು. ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಮಕ್ಕಳ ಉಜ್ವಲಭವಿಷ್ಯಕ್ಕಾಗಿ ಉದ್ಯೋಗ ಖಾತ್ರಿಯನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್‌ ಸಂಪಗಾಂವಿ ತಿಳಿಸಿದರು.

Advertisement

ತಾಲೂಕಿನ ಮೇಕಲಮರಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ನಿರ್ದೇಶನದಂತೆ ದುಡಿಯೋಣ ಬಾ.. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬೈಲಹೊಂಗಲ ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿಗಳಲ್ಲಿಈ ಅಭಿಯಾನ ಮಾ.15 ರಿಂದ ಜೂ.15ರವರೆಗೆ 3 ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ತಾ.ಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಮಾತನಾಡಿ, ಗುಳೆತಪ್ಪಿಸಲು ನಿರ್ಗತಿಕರಿಗೆ ಬಡವರಿಗೆಉದ್ಯೋಗ ಖಾತ್ರಿಯಲ್ಲಿ ಉದ್ಯೋಗಕೊಡಲಾಗುವುದು. ನರೇಗಾದಡಿ ಹಲವಾರು ಕಾರ್ಯಕ್ರಮಗಳಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಕಾರ್ಯಕ್ರಮಗಳನ್ನು ವೈಯಕ್ತಕವಾಗಿ ಹಮ್ಮಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು

ಬೈಲಹೊಂಗಲ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್‌ ದಳವಾಯಿ, ಜಿ.ಪಂಸದಸ್ಯ ನಿಂಗಪ್ಪ ಅರಕೇರಿ, ಗ್ರಾ.ಪಂ ಅಧ್ಯಕ್ಷಚಂದ್ರಯ್ನಾ ಹಿರೇಮಠ ಮಾತನಾಡಿದರು.ಗ್ರಾ.ಪಂ ಸದಸ್ಯರಾದ ವಿಜಯಯಡಾಲ, ಕಾಶೀಮ ಜಮಾದಾರ, ರಾಜುಹಣ್ಣಿಕೇರಿ, ರಾಜು ಕಡಕೋಳ, ಭೀಮಪ್ಪಹುಲಮನಿ, ಕೃಷಿ ಇಲಾಖೆ, ಗ್ರಾ. ಪಂಸಿಬ್ಬಂದಿ, ಉದ್ಯೋಗ ಖಾತ್ರಿ ಕೂಲಿಕಾರರು, ಗ್ರಾಮಸ್ಥರು ಇದ್ದರು. ಪಿಡಿಒ ಶಶಿಕಲಾಅನಿಗೋಳ ಸ್ವಾಗತಿಸಿದರು. ಎಸ್‌ .ವಿ.ಹಿರೇಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next