Advertisement

“ಭಾನು ವೆಡ್ಸ್‌ ಭೂಮಿ’ಡಬ್ಬಿಂಗ್‌ ಮುಕ್ತಾಯ 

05:49 AM Feb 15, 2019 | Team Udayavani |

ಕಿಶೋರ್‌ ಶೆಟ್ಟಿ ನಿರ್ಮಾಣದ “ಭಾನು ವೆಡ್ಸ್‌ ಭೂಮಿ’ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸ್ಟುಡಿಯೋನಲ್ಲಿ ಡಬ್ಬಿಂಗ್‌ ಕಾರ್ಯ ಪೂರ್ಣಗೊಂಡಿತು. ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಗಣೇಶ್‌ ಹೆಗ್ಡೆ  ಛಾಯಾಗ್ರಹಣ, ಎ.ಎಂ. ನೀಲ್‌ ಸಂಗೀತ ಶ್ರೀನಿವಾಸ್‌ ಪಿ ಬಾಬು ಸಂಕಲನವಿದೆ.

Advertisement

ತಾರಾಗಣದಲ್ಲಿ ಸೂರ್ಯಪ್ರಭ್‌, ರಕ್ಷತಾ ಮಲಾಡ್‌. ಶೋಭರಾಜ್‌, ಗಿರೀಶ್‌, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್‌, ಹೆಚ್‌.ಎಂ.ಟಿ. ಜಿ, ಪ್ರವಿಣ್‌, ಮಿಮಿಕ್ರಿ ರಾಜು ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ.

ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ “ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ.

Advertisement

Udayavani is now on Telegram. Click here to join our channel and stay updated with the latest news.

Next