Advertisement
2ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಅಮೆರಿಕದ ಅರ್ಹತಾ ಆಟಗಾರ್ತಿ ಜೆನ್ನಿಫರ್ ಬ್ರಾಡಿ ವಿರುದ್ಧ 7-5, 1-6, 6-3 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಕ್ವಿಟೋವಾ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಸ್ಲೋವಾಕಿಯಾದ ವಿಕ್ಟೋರಿಯಾ ಕುಜೊ¾àವಾ.
ಜರ್ಮನಿಯ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ತೈವಾನ್‌ನ ಶೀ ಸು-ವೀ ವಿರುದ್ಧ 7-5, 4-6, 0-6 ಅಂತರದಿಂದ ಪರಾಭವಗೊಂಡರು. ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದ ಕೆರ್ಬರ್ ಉಳಿದರೆಡೂ ಸೆಟ್‌ಗಳನ್ನು ಕಳೆದುಕೊಂಡರು.ಇದಕ್ಕೂ ಮುನ್ನ “ಆಸ್ಟ್ರೇಲಿಯನ್ ಓಪನ್’ ಚಾಂಪಿಯನ್, ಜಪಾನಿನ ನವೋಮಿ ಒಸಾಕಾ ದುಬಾೖ ಮೂಲದ ಫ್ರೆಂಚ್ ಆಟಗಾರ್ತಿ ಕ್ರಿಸ್ಟಿನಾ ಮಲ್ಡೊನೊವಿಕ್ ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಸೋಲನುಭವಿಸಿದರು.