ನವದೆಹಲಿ: ಕಳೆದ ಕೆಲವು ವಾರಗಳಲ್ಲಿ ಎರಡು ಬಾರಿ ಕೋವಿಡ್ 19 ಸೋಂಕಿನ ಪಾಸಿಟಿವ್ ಸರ್ಟಿಫಿಕೇಟ್ ಜತೆ ಪ್ರಯಾಣಿಕರನ್ನು ಕರೆತಂದಿರುವ ಆರೋಪದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಸೆ.18ರಿಂದ (2020) ಅಕ್ಟೋಬರ್ 2ರವರೆಗೆ ಸಂಚಾರ ನಿಷೇಧಿಸಿರುವುದಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಯುಎಇ ಸರ್ಕಾರದ ಕಾನೂನಿನ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಬಳಿ ವಿಮಾನ ಪ್ರಯಾಣ ಆರಂಭಿಸುವ 96ಗಂಟೆಗಳ ಮೊದಲು ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆ ನಡೆಸಿ ಕೋವಿಡ್ 19 ನೆಗೆಟಿವ್ ವರದಿಯ ಒರಿಜಿನಲ್ ಸರ್ಟಿಫಿಕೇಟ್ ಅಗತ್ಯವಾಗಿ ಹೊಂದಿರಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್
ಸೆಪ್ಟೆಂಬರ್ 2ರಂದು ಕೋವಿಡ್ 19 ಪಾಸಿಟಿವ್ ಪ್ರಮಾಣ ಪತ್ರ ಹೊಂದಿದ್ದ ವ್ಯಕ್ತಿಯೊಬ್ಬರು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಸೆಪ್ಟೆಂಬರ್ 4ರಂದು ಜೈಪುರ್ -ದುಬೈಗೆ ಪ್ರಯಾಣಿಸಿದ್ದರು. ಇದೇ ರೀತಿಯ ಘಟನೆ ಮತ್ತೊಂದು ಏರ್ ಲೈನ್ಸ್ ನಲ್ಲಿನಯೂ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ಘಟನೆ ನಂತರ ದುಬೈ ನಾಗರಿಕ ವಿಮಾನಯಾನ ಅಧಿಕಾರಿಗಳು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಸಂಚಾರವನ್ನು ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ರದ್ದುಗೊಳಿಸಿರುವುದಾಗಿ ವಿವರಿಸಿದ್ದಾರೆ.