Advertisement

ಏರ್ ‌ಇಂಡಿಯಾಗೆ ನಿರ್ಬಂಧ

12:59 AM Sep 19, 2020 | mahesh |

ಹೊಸದಿಲ್ಲಿ: ಇತ್ತೀಚೆಗೆ ಎರಡು ಬಾರಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ವಿಮಾನದಲ್ಲಿ ಕರೆ ತಂದಿದ್ದ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ಅ.2ರವರೆಗೆ ನಿರ್ಬಂಧ ಹೇರಿದೆ.

Advertisement

ಭಾರತ ಸೇರಿದಂತೆ ವಿದೇಶಗಳಿಂದ ಆಗಮಿಸುವ ವ್ಯಕ್ತಿಗಳು ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ(ಆರ್‌ಟಿ ಪಿಸಿಆರ್‌ ಪರೀಕ್ಷೆ) ಹೊಂದಿರಬೇಕಾದ್ದು ಕಡ್ಡಾಯ ಎಂದು ಯುಎಇ ಸರಕಾರವು ಘೋಷಿಸಿತ್ತು. ಆದರೆ, ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ 2 ಬಾರಿ ಕೊರೊನಾ ಪಾಸಿಟಿವ್‌ ಪ್ರಮಾಣಪತ್ರ ಹೊಂದಿದ್ದ ವ್ಯಕ್ತಿಗಳು ಸಂಚರಿಸಿದ್ದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಇದನ್ನು ಗಂಭೀರವಾಗಿ ಪರಿಗಣಿಸಿ ಅ.2ರವರೆಗೆ ಈ ವಿಮಾನದ ಸಂಚಾರಕ್ಕೆ ನಿರ್ಬಂಧ ಹೇರುತ್ತಿರುವುದಾಗಿ ದುಬೈ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next