Advertisement
ಗಲ್ಫ್ ಕರ್ನಾಟಕೋತ್ಸವದಲ್ಲಿ ಕರ್ನಾಟಕದವರು ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ವರ್ಷ ಪ್ರದಾನಿಸಲಾಗುವ “ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿ 2023” ದುಬಾಯಿಯ ಪ್ರತಿಷ್ಠಿತ ಗ್ರ್ಯಾಂಡ್ ಹಯಾತ್ ಬನಿಯಾಸ್ ಬಾಲ್ ರೂಂ ಸಭಾಂಗಣದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಗೌರವ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರು ಮಾನ್ಯ ಯು.ಟಿ.ಖಾದರ್ ಮತ್ತು ಯುಎಇ ಯ ಆಡಳಿತ ದೊರೆಗಳ ಮನೆತನದ ಗೌರವಾನ್ವಿತರು ಪಾಲ್ಗೊಳ್ಳಲಿದ್ದಾರೆ.
ಗಲ್ಫ್ ಕರ್ನಾಟಕೋತ್ಸವದಲ್ಲಿ ಮಾಧ್ಯಮಗಳು ವಿಶೇಷ ಪಾತ್ರ ವಹಿಸಲಿದೆ. ಪ್ರಮುಖ ವಾಹಿನಿಗಳು ಸಮಾರಂಭದ ನೇರ ಪ್ರಸಾರದ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ಮುಟ್ಟಿಸಲು ಸಜ್ಜಾಗಿದೆ. ಗಲ್ಫ್ ಕರ್ನಾಟಕೋತ್ಸವ – ಪಕ್ಷಿನೋಟ
ಗಲ್ಫ್ ಕರ್ನಾಟಕೋತ್ಸವ ವಾರ್ಷಿಕ ಅನಿವಾಸಿ ಕನ್ನಡಿಗರ ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗುವ ಅಂತಾರಾಷ್ಟ್ರೀಯ ಉತ್ಸವವಾಗಿದ್ದು ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವವರ ಸಾಧನೆಯನ್ನು ಪುರಸ್ಕರಿಸುವ ವೇದಿಕೆಯಾಗಿದ್ದು. ನಡೆದು ಬಂದಿರುವ ಹಾದಿಯ ಮೇಲೆ ಬೆಳಕು ಚೆಲ್ಲುವ ದಾಖಲೆಗಳ ಸಂಪುಟದ ಅನಾವರಣ ಹಾಗೂ ಅಭಿಮಾನಿ ಅನಿವಾಸಿ ಕನ್ನಡಿಗರ ಸಮಾವೇಶವಾಗಿದೆ.