Advertisement

ಭಾರತಕ್ಕೆ ತೆರಳುವ 2  ವಿಮಾನಗಳು ಒಂದೇ ರನ್‌ವೇಯಲ್ಲಿ: ದುಬೈನಲ್ಲಿ ತಪ್ಪಿದ ದುರಂತ

06:32 PM Jan 14, 2022 | Team Udayavani |

ದುಬೈ : ಭಾರತಕ್ಕೆ ತೆರಳುವ ಎರಡು ವಿಮಾನಗಳು ಒಂದೇ ರನ್‌ವೇಯಲ್ಲಿ ಬಂದ ಘಟನೆ ಜನವರಿ 9 ರಂದು ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ದುಬೈನಿಂದ ಹೈದರಾಬಾದ್‌ಗೆ ಹೊರಟಿದ್ದ EK-524  ಮತ್ತು ದುಬೈನಿಂದ ಬೆಂಗಳೂರು ಎಮಿರೇಟ್ಸ್ EK-568 ವಿಮಾನಗಳು ಒಂದೇ ರನ್‌ವೇಯಲ್ಲಿ ಬಂದಿವೆ. ಈ ವೇಳೆ ಪೈಲಟ್ ಗಳು ಚಾಕಚಕ್ಯತೆ ಮೆರೆದಿದ್ದು, ಢಿಕ್ಕಿಯನ್ನು ತಪ್ಪಿಸಿ ಹಲವಾರು ಜೀವಗಳನ್ನು ಉಳಿಸಿದ್ದಾರೆ.

EK-524 ದುಬೈನಿಂದ ಹೈದರಾಬಾದ್‌ಗೆ ರಾತ್ರಿ 9.45 ಕ್ಕೆ ಮತ್ತು EK-568 ದುಬೈನಿಂದ ಬೆಂಗಳೂರು ಎಮಿರೇಟ್ಸ್ ವಿಮಾನವು ಬಹುತೇಕ ಅದೇ ಸಮಯದಲ್ಲಿ ಟೇಕ್-ಆಫ್ ಆಗಬೇಕಿತ್ತು. ಆದಾಗ್ಯೂ, ಎಮಿರೇಟ್ಸ್ ವಿಮಾನ ವೇಳಾಪಟ್ಟಿಯ ಪ್ರಕಾರ, ಎರಡು ಟೇಕ್-ಆಫ್‌ಗಳ ನಡುವೆ ಐದು ನಿಮಿಷಗಳ ಅಂತರವಿತ್ತು.

“ದುಬೈ-ಹೈದರಾಬಾದ್‌ EK-524 ವಿಮಾನ ರನ್‌ವೇ 30R ನಿಂದ ಟೇಕ್-ಆಫ್ ಮಾಡಲು ವೇಗವನ್ನು ಹೊಂದಿತ್ತು, ಸಿಬ್ಬಂದಿ ಅದೇ ದಿಕ್ಕಿನಲ್ಲಿ ಹೆಚ್ಚಿನ ವೇಗದಲ್ಲಿ ಬರುತ್ತಿರುವ ವಿಮಾನವನ್ನು ನೋಡಿದರು. ಟೇಕ್-ಆಫ್ ಅನ್ನು ತಕ್ಷಣವೇ ತಿರಸ್ಕರಿಸಲು ATC ನಿಂದ ಸೂಚಿಸಲಾಯಿತು. ವಿಮಾನವು ಸುರಕ್ಷಿತವಾಗಿ ನಿಧಾನವಾಯಿತು. ಮತ್ತು ರನ್‌ವೇಯನ್ನು ದಾಟಿದ ಟ್ಯಾಕ್ಸಿವೇ N4 ಮೂಲಕ ರನ್‌ವೇಯನ್ನು ತೆರವುಗೊಳಿಸಲಾಯಿತು. ಮತ್ತೊಂದು ಎಮಿರೇಟ್ಸ್ ಫ್ಲೈಟ್ EK-568, ದುಬೈನಿಂದ ಬೆಂಗಳೂರಿಗೆ ಹೊರಡುತ್ತಿತ್ತು, ಅದೇ ರನ್‌ವೇ 30R ನಿಂದ ಟೇಕ್-ಆಫ್ ಆಗಬೇಕಿತ್ತು” ಎಂದು ಘಟನೆಯ ಬಗ್ಗೆ ತಿಳಿದಿರುವ ವ್ಯಕ್ತಿಯ ಹೇಳಿಕೆಯನ್ನು ಎಎನ್ಐ ಉಲ್ಲೇಖಿಸಿದೆ.

ಏರ್‌ಲೈನ್ಸ್ ಕಂಪನಿ ಎಮಿರೇಟ್ಸ್ ಏರ್‌ನಿಂದ ಸುರಕ್ಷತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ದೃಢಪಡಿಸಿದೆ.

Advertisement

ಯುಎಇಯ ವಾಯುಯಾನ ತನಿಖಾ ಸಂಸ್ಥೆ ದಿ ಏರ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಸೆಕ್ಟರ್, (ಎಎಐಎಸ್) ತನಿಖೆಯನ್ನು ಪ್ರಾರಂಭಿಸಿದೆ. ಗಂಭೀರವಾದ ಸುರಕ್ಷತಾ ಲೋಪವನ್ನು ವಿಮಾನಯಾನ ಸಂಸ್ಥೆಗಳಿಗೆ ವರದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next