Advertisement

Dubai: ಅಟ್ಕಿನ್ಸನ್‌, ಚಾಮರಿ ತಿಂಗಳ ಕ್ರಿಕೆಟಿಗರು

11:32 PM Aug 12, 2024 | Team Udayavani |

ದುಬಾೖ: ಇಂಗ್ಲೆಂಡ್‌ ತಂಡದ ವೇಗಿ ಗಸ್‌ ಅಟ್ಕಿನ್ಸನ್‌ ಮತ್ತು ಶ್ರೀಲಂಕಾ ವನಿತಾ ತಂಡದ ನಾಯಕಿ ಚಾಮರಿ ಅತ್ತಪಟ್ಟು “ತಿಂಗಳ ಕ್ರಿಕೆಟಿಗರು’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಬ್ಬರೂ ಜುಲೈ ತಿಂಗಳ ಶ್ರೇಷ್ಠ ಆಟಗಾರರಾಗಿ ಮೂಡಿಬಂದಿದ್ದಾರೆ.

Advertisement

ಗಸ್‌ ಅಟ್ಕಿನ್ಸನ್‌ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದರು. 2 ಸಲ 5 ಪ್ಲಸ್‌ ವಿಕೆಟ್‌ ಉರುಳಿಸಿದ ಸಾಧನೆ ಇವರದ್ದಾಗಿತ್ತು. ಒಟ್ಟು 22 ವಿಕೆಟ್‌ ಹಾರಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ಭಾರತದ ವಾಷಿಂಗ್ಟನ್‌ ಸುಂದರ್‌ ಮತ್ತು ಸ್ಕಾಟ್ಲೆಂಡ್‌ನ‌ ಸೀಮರ್‌ ಚಾರ್ಲಿ ಕ್ಯಾಸೆಲ್‌.

ಚಾಮರಿ ಅತ್ತಪಟ್ಟು ಶ್ರೀಲಂಕಾಕ್ಕೆ ಮೊದಲ ಏಷ್ಯಾ ಕಪ್‌ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಸ್ಪರ್ಧೆಯಲ್ಲಿದ್ದ ಉಳಿದಿಬ್ಬರು ಆಟಗಾರ್ತಿಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next