Advertisement
ಎಬಿ ಡಿ ವಿಲಿಯರ್ ಅವರಿಗೆ ತಂಡದ ನೇತೃತ್ವ ವಹಿಸಲಾಗಿದೆ. ಬೆನ್ನು ಹಾಗೂ ಭುಜದ ನೋವಿಗೆ ಸಿಲುಕಿದ್ದ ಡು ಪ್ಲೆಸಿಸ್ ಕಳೆದ ವಾರವೇ ಚೇತರಿಸಿಕೊಂಡು “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದರು. ಆದರೆ ಅವರೀಗ ವೈರಲ್ ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಂಡದ ಮ್ಯಾನೇಜರ್ ಮೊಹಮ್ಮದ್ ಮೂಸಾಜಿ ಹೇಳಿದ್ದಾರೆ. ಭಾರತದ ವಿರುದಟಛಿ ಜ. 5ರಿಂದ ಕೇಪ್ಟೌನ್ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದ ವೇಳೆ ಡು ಪ್ಲೆಸಿಸ್ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಮೂಸಾಜಿ ಹೇಳಿದರು.