Advertisement

ಬ್ಯಾಂಕ್‌ ಆಫ್ ಮಹಾರಾಷ್ಟ್ರದ ಮಾಜಿ ಸಿಎಂಡಿ ಸಹಿತ 6 ಮಂದಿ ಅರೆಸ್ಟ್‌

05:12 PM Jun 20, 2018 | Team Udayavani |

ಪುಣೆ : ನಗರದ ರಿಯಲ್‌ ಎಸ್ಟೇಟ್‌ ಡೆವಲಪರ್‌ ಆಗಿರುವ ಡಿ ಎಸ್‌ ಕುಲಕರ್ಣಿ ಮತ್ತು ಅವರ ಪತ್ನಿಯ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ  ಪುಣೆ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬ್ಯಾಂಕ್‌ ಆಫ್ ಮಹಾರಾಷ್ಟ್ರದ ಮಾಜಿ ಸಿಎಂಡಿ, ಹಾಲಿ ಎಂ.ಡಿ.,  ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. 

Advertisement

ಅರೆಸ್ಟ್‌ ಆಗಿರುವ ವ್ಯಕ್ತಿಗಳೆಂದರೆ ಬ್ಯಾಂಕ್‌ ಆಫ್ ಮಹಾರಾಷ್ಟ್ರ ಇದರ ಹಾಲಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರವೀಂದ್ರ ಮರಾಠೆ, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಗುಪ್ತಾ, ಝೋನಲ್‌ ಮ್ಯಾನೇಜರ್‌ ನಿತ್ಯಾನಂದ ದೇಶ್‌ಪಾಂಡೆ, ಬ್ಯಾಂಕಿನ ಮಾಜಿ ಸಿಎಂಡಿ ಸುಶೀಲ್‌ ಮುಹನೋತ್‌, ಕುಲಕರ್ಣಿ ಅವರ ಸಿಎ ಸುನೀಲ್‌ ಘಟಪಾಂಡೆ, ಮತ್ತು ಉಪಾಧ್ಯಕ್ಷ ರಾಜೀವ್‌ ನೇವಸ್ಕರ್‌ (ಇವರು ಕುಲಕರ್ಣಿ ಅವರ ಡಿಎಸ್‌ಕುಲಕರ್ಣಿ ಡೆವಲಪರ್ಸ್‌ ಲಿಮಿಟೆಡ್‌ನ‌ ಇಂಜಿನಿಯರಿಂಗ್‌ ವಿಭಾಗದವರು). 

ಬಂಧಿತರಲ್ಲಿ ದೇಶಪಾಂಡೆ ಅವರನ್ನು ಅಹ್ಮದಾಬಾದ್‌ ನಲ್ಲಿ, ಮುನಹೋತ್‌ ಅವರನ್ನು ಜೈಪುರದಲ್ಲಿ ಮತ್ತು ಇತರ ಎಲ್ಲರನ್ನೂ ಪುಣೆಯಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next