Advertisement
ಮಂಗಳೂರಿಗೆ ಪ್ರತಿನಿತ್ಯ 2,000- 2,500 ಚೀಲ ಮೆಣಸು ಬಳ್ಳಾರಿಯ ಬ್ಯಾಡಗಿಯಿಂದ ಬರುತ್ತಿತ್ತು. ಆದರೆ ಗುರುವಾರ 1,200 ಗೋಣಿ ಮಾತ್ರ ಬಂದಿದೆ. ಬುಧವಾರವೂ ಪ್ರಮಾಣ ಕಡಿಮೆ ಇತ್ತು. ಇದರಿಂದ ಮೆಣಸು ಲಭ್ಯತೆ ಕಡಿಮೆಯಾಗಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ವರ್ತಕರ ಕಟ್ಟೆಯಲ್ಲಿ ಕೇಳಿ ಬರುತ್ತಿದೆ.
ಮಾರುಕಟ್ಟೆಗೆ ಬರುವ ಮೆಣಸಿನ ಪ್ರಮಾಣ ಕಡಿಮೆಯಾದರೆ ಕೂಲಿ ಗಳಿಗೂ ಕೆಲಸ ಇಲ್ಲದಂತಾಗುತ್ತದೆ ಎನ್ನುತ್ತಾರೆ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್. ಎಸಿಯಲ್ಲಿ ಸಂಗ್ರಹ
ಕೆಲವು ವರ್ತಕರು ಹೊಸ ಮೆಣಸು ಬಂದರೂ ಅದನ್ನು ಹವಾನಿಯಂತ್ರಿತ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟು ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ, ಬೆಲೆ ಏರಿಕೆ ಮಾಡುತ್ತಾರೆ ಎನ್ನುವ ಮಾತುಗಳೂ ಇವೆ.