Advertisement

ಬರಲಿದೆ ದೃಶ್ಯಂ 2

03:58 AM May 23, 2020 | Lakshmi GovindaRaj |

ಮಲಯಾಳಂ ನಟ ಮೋಹನ್‌ಲಾಲ್‌ ನಟಿಸಿದ್ದ ದೃಶ್ಯಂ ಸಿನಿಮಾ ನಿಮಗೆ ನೆನಪಿರಬಹುದು. ಥ್ರಿಲ್ಲರ್‌ ಕಥಾನಕ ಹೊಂದಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಿಗೆ ರೀಮೇಕ್‌ ಆಗಿ  ಅಲ್ಲೂ ಹಿಟ್‌ಲಿಸ್ಟ್‌ಗೆ ಸೇರಿತು. ಕನ್ನಡದಲ್ಲಿ ರವಿಚಂದ್ರನ್‌ ನಾಯಕರಾಗಿ ನಟಿಸಿದ್ದರು. ಇಲ್ಲೂ ಚಿತ್ರ ಸೂಪರ್‌ ಹಿಟ್‌ ಆಯಿತು.

Advertisement

ಈಗ  ಮಲಯಾಳಂನಲ್ಲಿ ದೃಶ್ಯಂ ಚಿತ್ರದ ಮುಂದುವರೆದ ಭಾಗ ಬರುತ್ತಿದೆ. ಇಷ್ಟು ದಿನ ಈ ಬಗ್ಗೆ ಗಾಸಿಪ್‌  ಹರಿದಾಡುತ್ತಿತ್ತು. ಆದರೆ ಈಗ ಈ ಸುದ್ದಿ ಅಧಿಕೃತವಾಗಿದೆ. ಮೋಹನ್‌  ಲಾಲ್‌ ಅವರ ಹುಟ್ಟುಹಬ್ಬ ಪ್ರಯುಕ್ತ ಈ ಚಿತ್ರದ ಫ‌ಸ್ಟ್‌ ಲುಕ್‌ ರಿಲೀಸ್‌ ಆಗಿದೆ. ನಟ ಮೋಹನ್‌ಲಾಲ್‌ ಅವರೇ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ದೃಶ್ಯಂ ಸಿನಿಮಾವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ದೃಶ್ಯಂ 2 ಸಿನಿಮಾವನ್ನೂ ನಿರ್ದೇಶಿಸುತ್ತಿದ್ದಾರೆ.

ಲಾಕ್‌ ಡೌನ್‌  ಮುಗಿದು ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬಳಿಕ ದೃಶ್ಯಂ 2 ಆರಂಭವಾಗಲಿದೆ. ಎಲ್ಲಾ ಓಕೆ, ಕಥೆ ಎಲ್ಲಿಂದ  ಆರಂಭವಾಗುತ್ತದೆ ಎಂದು ನೀವು ಕೇಳಬಹುದು. ಆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಇತ್ತೀಚೆಗೆ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಮೋಹನ್‌ ಲಾಲ್‌ ಅವರಿಗೆ ಬೇರೆ ಬೇರೆ ಚಿತ್ರರಂಗದ ಮಂದಿ ಶುಭ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next