Advertisement

ರವಿಚಂದ್ರನ್‌ ದೃಶ್ಯ-2 ಚಿತ್ರಕ್ಕೆ ತಯಾರಿ ಶುರು

04:25 PM Apr 23, 2021 | Team Udayavani |

ಸುಮಾರು ಏಳು ವರ್ಷದ ಹಿಂದೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ದೃಶ್ಯ’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಮಲಯಾಳಂನ ಸೂಪರ್‌ ಹಿಟ್‌ “ದೃಶ್ಯಂ’ ಚಿತ್ರದ ಕನ್ನಡ ರಿಮೇಕ್‌ ಆಗಿದ್ದ ಈ ಚಿತ್ರ ಬಾಕ್ಸಾμàಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿತ್ತು. ಇದೀಗ ಇದೇ “ದೃಶ್ಯ’ ಚಿತ್ರದ ಮುಂದುವರೆದ ಭಾಗವಾಗಿ “ದೃಶ್ಯ-2′ ತೆರೆಗೆ ಬರಲು ರೆಡಿಯಾಗುತ್ತಿದೆ.

Advertisement

ಇತ್ತೀಚೆಗಷ್ಟೇ ಮಲಯಾಳಂನಲ್ಲಿ “ದೃಶ್ಯಂ-2′ ಚಿತ್ರ ಬಿಡುಗಡೆಯಾಗಿ ಭರ್ಜರಿ ಸಕ್ಸಸ್‌ ಕಂಡಿತ್ತು. ಈಗ ಇದೇ ಚಿತ್ರ ಕನ್ನಡಕ್ಕೂ ರಿಮೇಕ್‌ ಆಗುತ್ತಿದ್ದು, ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತೂಮ್ಮೆ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರುವ ತಯಾರಾಗುತ್ತಿದ್ದಾರೆ.

ಇನ್ನು ಈ ಹಿಂದೆ “ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ನವ್ಯಾ ನಾಯರ್‌, ಅಚ್ಯುತ ಕುಮಾರ್‌ “ದೃಶ್ಯ-2′ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎನ್ನಲಾಗಿದೆ. “ದೃಶ್ಯ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದ ಪಿ. ವಾಸು ಈ ಚಿತ್ರಕ್ಕೂ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಅಂದಹಾಗೆ, ಇದೇ ಮೇ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಸದ್ಯದ ಮಟ್ಟಿಗೆ ಕೋವಿಡ್‌ ಆತಂಕ ಹೆಚ್ಚಾಗಿರುವುದರಿಂದ, “ದೃಶ್ಯ-2′ ಚಿತ್ರೀಕರಣ ಸ್ವಲ್ಪ ತಡವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next