Advertisement

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ

04:12 PM Apr 01, 2023 | Team Udayavani |

ಮುಂಬೈ : ಬ್ಯಾಂಕಾಕ್-ಮುಂಬೈ ವಿಮಾನದಲ್ಲಿ ಇಂಡಿಗೋ ಸಿಬಂದಿಯನ್ನು ನಿಂದಿಸಿದ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಕುಡಿದ ಅಮಲಿನಲ್ಲಿದ್ದ ಸ್ವೀಡಿಷ್ ಪ್ರಜೆಯೊಬ್ಬನನ್ನು ಗುರುವಾರ ಬಂಧಿಸಲಾಗಿದೆ.

Advertisement

ಬಂಧಿತನನ್ನು ಶುಕ್ರವಾರ ಅಂಧೇರಿ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 20,000 ರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ, ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

ಇಂಡಿಗೋ ವಿಮಾನ (6E-1052) ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಕ್ಲಾಸ್ ಎರಿಕ್ ಎಚ್‌ಜೆ ವೆಸ್ಟ್‌ಬರ್ಗ್ (63) ಎಂದು ಗುರುತಿಸಲಾದ ಆರೋಪಿಯನ್ನು ವಿಮಾನದಲ್ಲಿ ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಬಂಧಿಸಲಾಗಿದೆ.

ಪೊಲೀಸರು ದಾಖಲಿಸಿಕೊಂಡಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಆರೋಪಿಯು ಮತ್ಸ್ಯಾಹಾರಕ್ಕೆ ಬೇಡಿಕೆಯಿಡುವಾಗ ಅಶಿಸ್ತಿನ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿ ಪ್ರಯಾಣದುದ್ದಕ್ಕೂ ಮುಂದುವರೆಸಿದನು. ಗಗನಸಖಿ ಅವರಿಗೆ ಆ ಆಹಾರ ಲಭ್ಯವಿಲ್ಲ ಎಂದು ತಿಳಿಸಿ ನಂತರ ಅವರಿಗೆ ಚಿಕನ್ ಬಡಿಸಿದರು. ಆದರೆ, ಬಿಲ್ ಪಾವತಿಸುವಂತೆ ಕೇಳಿದಾಗ ಆತ ಆಕೆಯ ಕೈ ಹಿಡಿದಿದ್ದಾನೆ ಎನ್ನಲಾಗಿದೆ.

ಆರೋಪಿ ಎದ್ದು ಆಕೆಗೆ ಕಿರುಕುಳ ನೀಡಲು ಆರಂಭಿಸಿದಾಗ ಸಿಬಂದಿ ಆತನನ್ನು ಆಸನದಿಂದ ಹಿಂದಕ್ಕೆ ತಳ್ಳಿದ್ದಾರೆ. ವಾಗ್ವಾದದ ಸಮಯದಲ್ಲಿ ಇತರ ಸಿಬಂದಿಗಳ ಮೇಲೆ ನಿಂದನೆಗಳನ್ನು ಮಾಡಿದ್ದು, ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಪ್ರಯಾಣಿಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

Advertisement

24 ವರ್ಷದ ಗಗನಸಖಿ ಫ್ಲೈಟ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದು, ಸಂಭವನೀಯ ಪರಿಣಾಮಗಳ ಬಗ್ಗೆ ಆರೋಪಿಗೆ ಎಚ್ಚರಿಕೆ ನೀಡಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ವಿಮಾನ ಲ್ಯಾಂಡ್ ಆದ ನಂತರ, ಇಂಡಿಗೋ ಭದ್ರತಾ ಸಿಬಂದಿ ಮತ್ತು ಸಿಐಎಸ್‌ಎಫ್‌ಗೆ ಘಟನೆಯ ಬಗ್ಗೆ ಸೂಚನೆ ನೀಡಲಾಯಿತು, ನಂತರ ಅವರು ಅವನ ಜವಾಬ್ದಾರಿಯನ್ನು ವಹಿಸಿಕೊಂಡು ಸಹರ್ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next