Advertisement

ಕುರುಕಲು ತಿಂಡಿಗಳ ಖಾಲಿ ಕವರ್‌ಗಳಲ್ಲಿ ಡ್ರಗ್ಸ್‌ ತುಂಬಿ ಮಾರಾಟ!

12:26 PM Mar 11, 2022 | Team Udayavani |

ಬೆಂಗಳೂರು: ಕುರುಕಲು ತಿಂಡಿಗಳ ಖಾಲಿ ಕವರ್‌ಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ಅನುಮಾನ ಬಾರದಂತೆ ಸೆಲ್ಲೋ ಟೆಪ್‌ ಸುತ್ತಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಒಡಿಶಾ ಮೂಲದ ಗೋಲಕ್‌ ಬೆಹಾರ್‌ ಅಲಿ ಯಾಸ್‌ ದೀಪಕ್‌(32) ಬಂಧಿತ. ಈತನಿಂದ 8 ಲಕ್ಷ ರೂ. ಮೌಲ್ಯದ 7 ಕೆ.ಜಿ. ಗಾಂಜಾ, ಒಂದು ತೂಕದ ಯಂತ್ರ ಹಾಗೂ ಗಾಂಜಾ ಮಾರಾಟದಲ್ಲಿ ದೊರೆತ 65 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ .

Advertisement

ಒಡಿಶಾದಿಂದ ಗಾಂಜಾ ತರುತ್ತಿದ್ದ ಆರೋಪಿ, ಅದನ್ನು ವಾಸನೆ ಬಾರದಂತೆ ಸೆಲ್ಲೋ ಟೆಪ್‌ ಸುತ್ತಿ ವಾಸನೆ ಬಾರ ದಂತೆ ರೈಲಿನಲ್ಲಿ ತರುತ್ತಿದ್ದ. ಮೈಕೋಲೇಔಟ್‌ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದೀಪಕ್‌, ಕರುಕಲು ತಿಂಡಿಯ ಪ್ಯಾಕೆಟ್‌ಗಳನ್ನು ಖರೀದಿಸಿ ತರುತ್ತಿದ್ದ. ಅವುಗಳನ್ನು ಮನೆ ಯಲ್ಲಿ ತಿಂದು ಅಥವಾ ಎಸೆದು, ಖಾಲಿ ಪ್ಯಾಕೆಟ್‌ಗಳಿಗೆ ಗಾಂಜಾ ತುಂಬಿ ಮಾರಾಟ ಮಾಡುತ್ತಿದ್ದ. ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ 5 ಗ್ರಾಂ ಪ್ಯಾಕೆಟ್‌ ಗಳಿಗೆ 500, 10 ಗ್ರಾಂಗೆ 1000 ರೂ. 20 ಗ್ರಾಂ ಗಾಂಜಾಕ್ಕೆ 2000 ರೂ.ಗಳಂತೆ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು. ಆರೋಪಿ ವಿರುದ್ಧ ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಇಬ್ಬರು ಮನೆಗಳ್ಳರ ಬಂಧನ 

ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ, ಪಾದರಾಯನಪುರ ನಿವಾಸಿಗಳಾದ ಮುಬಾರಕ್‌ ಷರೀಫ್ (25) ಮತ್ತು ಸೈಯದ್‌ ಇಕ್ಬಾಲ್‌ (27) ಬಂಧಿತರು. ಆರೋಪಿ ಯಿಂದ 3.20 ಲಕ್ಷ ರೂ. ಮೌಲ್ಯದ 74 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರ ಶಾಮಣ್ಣ ಗಾರ್ಡ್‌ ನ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿಗಳು 74 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಗಳು ಈ ಹಿಂದೆ ಕೆಲ ಪ್ರದೇಶಗಳ್ಲಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿಯಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕ್ರಿಕೆಟ್‌ ಬೆಟ್ಟಿಂಗ್‌: ವ್ಯಕ್ತಿ ಸೆರೆ, ನಗದು ಜಪ್ತಿ

Advertisement

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ನವಾಬ್‌ ಅಹಮದ್‌ (32) ಬಂಧಿತ. ಈತನಿಂದ 1.10 ಲಕ್ಷ ರೂ. ನಗದು, ಮೊಬೈಲ್‌ ಜಪ್ತಿ ಮಾಡಲಾಗಿದೆ. ಆರೋಪಿ ಇತ್ತೀಚೆಗೆ ನಡೆಯುತ್ತಿರುವ ಐಸಿಸಿ ವುಮೆನ್ಸ್‌ ವರ್ಲ್x ಕಪ್‌ ಸರಣಿ ಕುರಿತು ಬೆಟ್ಟಿಂಗ್‌ ನಡೆಸುತ್ತಿದ್ದ. ಬುಧವಾರ ನಡೆದ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆàಂಡ್‌ ನಡುವಿನ ಪಂದ್ಯಕ್ಕೆ ಪಂಟರ್‌ಗಳಿಂದ ಹಣ ಕಟ್ಟಿಸಿಕೊಂಡು, ಗೆದ್ದವರಿಂದ ಹಣ ಪಡೆಯಲು ಮತ್ತು ಸೋತವರಿಗೆ ಹಣ ಕೊಡಲು ಕೆ.ಜಿ.ಹಳ್ಳಿಯ ಬಳಿಯ ವಿನೋಭನಗರಕ್ಕೆ ಬಂದಿದ್ದ. ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next