Advertisement

ಬಿಜೆಪಿಯಿಂದ ಡ್ರಗ್‌ ಮುಕ್ತ ಕರ್ನಾಟಕ ಅಭಿಯಾನ

01:33 PM Sep 30, 2020 | Suhan S |

ಗುಂಡ್ಲುಪೇಟೆ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದಲ್ಲಿ ಡ್ರಗ್‌ ಮುಕ್ತ ಕರ್ನಾಟಕ ಅಭಿಯಾನ ನಡೆಸಿದರು.

Advertisement

ಪ್ರಮುಖಬೀದಿಗಳಲ್ಲಿ ಸಾಗಿದಕಾರ್ಯಕರ್ತರು ಮಾದಕವಸ್ತು ಬಳಕೆಯಿಂದ ಯುವ ಸಮುದಾಯ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ನಂತರ ಪೊಲೀಸ್‌ ಠಾಣೆಯವರೆಗೆ ಮೆರವಣಿ ನಡೆಸಿ, ಮಾದಕ ವಸ್ತುಗಳ ಮಾರಾಟದ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್‌,ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ  ಕಾರ್ಯದರ್ಶಿಗಳಾದ ಸುನೀಲ್‌, ಸುರೇಶ್‌, ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಎಂ.ನಂದೀಶ್‌, ಬಸವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

……………………………………………………………………………………………………………………………………………………………………

ವರದಕ್ಷಿಣೆ ಕಿರುಕುಳ: ಗೃಹಿಣಿ ಆತಹತ್ಯೆ :

ಚಾಮರಾಜನಗರ: ವರದಕ್ಷಿಣೆಕಿರುಕುಳ ತಾಳಲಾರದೇ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದಲ್ಲಿ ಜರುಗಿದೆ. ಗ್ರಾಮದ ರಾಜೇಂದ್ರ ಎಂಬಾತನ ಪತ್ನಿ ತ್ರಿವೇಣಿ(21) ಆತ್ಮಹತ್ಯೆ ಮಾಡಿಕೊಂಡವರು. ಘಟನೆಯ ಸಂಬಂಧ ಪೊಲೀಸರು ಗೃಹಿಣಿಯ ಗಂಡ, ಮಾವ ಮತ್ತು ಅತ್ತೆಯನ್ನು ಬಂಧಿಸಿದ್ದಾರೆ.ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ

Advertisement

ಕಾಂತರಾಜು ಪುತ್ರಿ ತ್ರಿವೇಣಿಯನ್ನು ಅಂಕನಶೆಟ್ಟಿ ಪುರ ಗ್ರಾಮದ ರಾಜೇಂದ್ರಕಳೆದ ವರ್ಷವಷ್ಟೇ ಮದುವೆಯಾಗಿದ್ದ. ತಮ್ಮ ಮಗಳಿಗೆ ಗಂಡ ರಾಜೇಂದ್ರ, ಮಾವ ಮಹದೇವಶೆಟ್ಟಿ, ಅತ್ತೆ ಭಾಗ್ಯಮ್ಮ ವರದಕ್ಷಿಣೆ ತರುವಂತೆ ಪೀಡಿಸಿ,ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಹಣತಾರದಕಾರಣ ಪತಿಯ ಮನೆಯವರು ಆಕೆಯನ್ನುಕೊಲೆ ಮಾಡಿದ್ದಾರೆ ಎಂದು ತ್ರಿವೇಣಿಯ ತಂದೆ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಎಸ್ಪಿ ಅನಿತಾ, ಡಿವೈಎಸ್‌ಪಿ ಅನ್ಸರ್‌ ಅಲಿ, ತಹಶೀಲ್ದಾರ್‌ ಚಿದಾನಂದಗುರುಸ್ವಾಮಿ, ಸಿಐ ನಂಜಪ್ಪ, ಎಸ್‌ಐ ತಾಜುದ್ದೀನ್‌ ಸ್ಥಳಕ್ಕೆ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next