Advertisement

ಡ್ರಗ್‌ ಅಡಿಕ್ಷನ್‌ ಪ್ರಿವೆನ್ಶನ್‌ ಆಫೀಸರ್‌ ನೇಮಕ

03:45 AM Jul 07, 2017 | Team Udayavani |

ಡ್ರಗ್ಸ್‌ ಬಲೆಗೆ ಬೀಳದಂತೆ ತಡೆಯಲು ಶಾಲೆ ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ
ಮಹಾನಗರ
: ಕರಾವಳಿಯಲ್ಲಿ ಡ್ರಗ್ಸ್‌ ಹಾವಳಿ ಸಮಸ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಶಾಲಾ-ಕಾಲೇಜು ಮಟ್ಟದಲ್ಲೇ ಜಿಲ್ಲಾಡಳಿತ ಶಿಕ್ಷಕರನ್ನೇ ಡ್ರಗ್‌ ಅಡಿಕ್ಷನ್‌ ಪ್ರಿವೆನ್ಶನ್‌ ಆಫೀಸರ್‌ ಎಂದು ನೇಮಿಸಿದೆ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅವರ ಸೂಚನೆಯ ಮೇರೆಗೆ ಶಾಲೆ- ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ಶಿಕ್ಷಕರು, ಉಪನ್ಯಾಸಕರು ಎಂದು ಗುರುತಿಸಲಾದವರನ್ನು ಡ್ರಗ್‌ ಅಡಿಕ್ಷನ್‌ ಪ್ರಿವೆನ್ಶನ್‌ ಆಫೀಸರ್‌ ಆಗಿ ನೇಮಿಸಲಾಗಿದೆ. ಮಾದಕ ವ್ಯಸನಕ್ಕೆ ಒಳಗಾಗಿರುವ ಮತ್ತು ಒಳಗಾಗುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಸರಿದಾರಿಗೆ ತರುವುದು ಅವರ ಹೊಣೆಗಾರಿಕೆ.

Advertisement

ಅವರಿಗೆ ಶಾಲೆ- ಕಾಲೇಜುಗಳ ಪರಿಸರ ಮಾತ್ರವಲ್ಲದೆ, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಹಾಸ್ಟೆಲ್‌ಗ‌ಳಿಗೆ ಯಾವಾಗ ಬೇಕಾದರೂ ಭೇಟಿ ನೀಡಿ ಪರಿಶೀಲಿಸುವ ಅಧಿಕಾರ ನೀಡಲಾಗಿದೆ. ಇಂಥ ಕಡೆ ಡ್ರಗ್ಸ್‌ ಸೇವನೆಯಲ್ಲಿ ವಿದ್ಯಾರ್ಥಿಗಳು ತೊಡಗಿ ಕೊಂಡಿರುವುದು ಅಥವಾ ಯಾರಾದರೂ ಡ್ರಗ್ಸ್‌ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾದರೆ ಡಿಡಿಪಿಯು ಅಥವಾ ಡಿಡಿಪಿಐಗೆ ಮಾಹಿತಿ ಒದಗಿಸಲಾಗು ತ್ತದೆ. ಬಳಿಕ ಡಿಡಿಪಿಐ ಹಾಗೂ ಡಿಡಿಪಿಯು ಪೊಲೀಸರ ಜತೆ ಹೋಗಿ ಮಕ್ಕಳ ರಕ್ಷಣೆ ಮಾಡುತ್ತಾರಲ್ಲದೇ, ಡ್ರಗ್‌ ಪೂರೈಕೆಯ ಮೂಲವನ್ನೂ ಪತ್ತೆ ಹಚ್ಚಲೂ ಕ್ರಮ ಕೈಗೊಳ್ಳುತ್ತಾರೆ.

ಶಾಲೆ- ಕಾಲೇಜುಗಳಲ್ಲಿ  ವ್ಯವಸ್ಥೆ
ಸರಕಾರಿ ಪ್ರಾಥಮಿಕ-921, ಅನುದಾನಿತ ಪ್ರಾಥಮಿಕ- 215, ಅನುದಾನ ರಹಿತ ಪ್ರಾಥಮಿಕ ಶಾಲೆ-317, ಸರಕಾರಿ ಪ್ರೌಢಶಾಲೆ-169,  ಅನುದಾನಿತ ಪ್ರೌಢಶಾಲೆ-120 ಹಾಗೂ ಅನುದಾನ ರಹಿತ 251 ಪ್ರೌಢಾಲೆಗಳ ಪೈಕಿ ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಶೇ.25-30ರಷ್ಟು ಶಾಲೆಗಳನ್ನು ಹೊರತುಪಡಿಸಿ ಉಳಿದೆಡೆ ಡ್ರಗ್‌ ಅಡಿಕ್ಷನ್‌ ಪ್ರಿವೆನ್ಶನ್‌ ಆಫೀಸರ್‌ಗಳನ್ನು ನೇಮಿಸಲಾಗಿದೆ. 176 ಜೂನಿಯರ್‌ ಕಾಲೇಜುಗಳಲ್ಲೂ ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಶಿಕ್ಷಕರಿಗೆ ವಿಶೇಷ ತರಬೇತಿ ಒದಗಿಸ ದಿದ್ದರೂ, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಕೊಂಡ ಮಕ್ಕಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ರಕ್ಷಿಸುವ ಕೆಲಸ ಮಾಡಲಾಗುತ್ತದೆ ಎನ್ನುತ್ತಾರೆ ಡಿಡಿ ಪಿಯು ತಿಮ್ಮಯ್ಯ ಹಾಗೂ ಡಿಡಿಪಿಐ ವಾಲ್ಟರ್‌ ಡಿಮೆಲ್ಲೋ.

ಎನ್‌ಜಿಒ, ಪೊಲೀಸರಿಂದ ಜಾಗೃತಿ
ಎನ್‌ಜಿಒ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ಶಾಲೆ- ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಡ್ರಗ್ಸ್‌ನಿಂದಾಗುವ ಸಮಸ್ಯೆಗಳ ಕುರಿತು ತಿಳಿ ಹೇಳಲಾಗುವುದು. ಸ್ಥಳೀಯ ಪೊಲೀಸರೂ ಶಾಲೆ-ಕಾಲೇಜುಗಳಿಗೆ ಈ ನಿಟ್ಟಿನಲ್ಲಿ ಅರಿವು ಮೂಡಿಸುವರು. ಮಾದಕ ವ್ಯಸನಕ್ಕೆ ಒಳಗಾಗಿರುವ ಮಕ್ಕಳನ್ನು ಗುಣಪಡಿಸಲು ಪುನರ್ವಸತಿ ಕೇಂದ್ರಗಳಿವೆ.

ಮಾದಕ ವ್ಯಸನಕ್ಕೆ ಒತ್ತಡವೂ ಕಾರಣ 
ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗದಂತೆ ತಡೆಗಟ್ಟಲು ಪೋಷಕರು, ಶಾಲೆಗಳಲ್ಲಿ ಶಿಕ್ಷಕರು, ಸಮಾಜದಲ್ಲಿ ಅಧಿಕಾರಿಗಳು, ಪೊಲೀಸರು ಶ್ರಮಿಸಬೇಕು. ತಂದೆ- ತಾಯಿಯರ ಪಾತ್ರ ತುಂಬಾ ಹೆಚ್ಚಿದೆ.ಯಾವುದೇ ಕಾರಣಕ್ಕೂ ಮಕ್ಕಳಿಗೆ ಒತ್ತಡ ಹಾಕಬಾರದು. ಜಿಲ್ಲೆಯಿಂದ ಓಡಿ ಹೋದ 216 ಮಕ್ಕಳಲ್ಲಿ 200 ಮಂದಿ ಸಿಕ್ಕಿದ್ದಾರೆ. ಇವರ ಪೈಕಿ 60 ಮಕ್ಕಳು ಓಡಿ ಹೋಗಲು ಕಾರಣ ಮನೆಯಲ್ಲಿನ ಒತ್ತಡ. ಓದಬೇಕು, ಅಂಕಗಳನ್ನು ತೆಗೆಯಬೇಕು, ಗ್ರೇಡ್‌ ತೆಗೆಯಬೇಕೆಂಬ ಒತ್ತಡ. ಇನ್ನೂ° 60 ಮಕ್ಕಳ ಮನೆಯಲ್ಲಿ ಸಾಮಾಜಿಕ ಸಮಸ್ಯೆ. ಇದಕ್ಕಿಂತ ಸಾವಿರ ಪಟ್ಟು ಮಕ್ಕಳು, ಜನರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಅವರು ಮನೆಯಿಂದ ಓಡಿ ಹೋಗಿಲ್ಲವಷ್ಟೇ. ಆದ್ದರಿಂದ, ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹಾಕದೆ, ಅವರೇ ಪೂರ್ಣ ಮನಸ್ಸಿನಿಂದ ಕಲಿಯುವಂಥ ಪರಿಸರ ನಿರ್ಮಿಸಬೇಕು.
– ಡಾ| ಕೆ.ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement

– ಭರತ್‌ರಾಜ್‌ ಕಲ್ಲಡ್ಕ

Advertisement

Udayavani is now on Telegram. Click here to join our channel and stay updated with the latest news.

Next