ಚಂಡೀಗಢ : ಅತ್ಯಂತ ನೀಚತನದ ಮತ್ತು ಹೇಯ ಘಟನೆಯೊಂದರಲ್ಲಿ ಮಾದಕ ದ್ರವ್ಯ ವ್ಯಸನಿಯೋರ್ವ, ಡ್ರಗ್ ಖರೀದಿಗೆ ಹಣ ಹೊಂದಿಸುವ ಸಲುವಾಗಿ, ತನ್ನ ಏಳು ಮಂದಿ ಸ್ನೇಹಿತರಿಗೆ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದಲ್ಲದೆ ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಅವುಗಳನ್ನು ಬಹಿರಂಗಗೊಳಿಸಿರುವುದು ವರದಿಯಾಗಿದೆ.
ಪಂಜಾಬಿನ ಲೂಧಿಯಾನದ ಡಾಖಾ ಎಂಬ ಗ್ರಾಮದಲ್ಲಿ ಈ ಹೇಯ ಘಟನೆ ಇದೇ ವರ್ಷ ಜೂನ್ ತಿಂಗಳಲ್ಲಿ ನಡೆದಿದ್ದು ಈಗ ತಡವಾಗಿ ವರದಿಯಾಗಿದೆ.
ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯು ನೀಡಿದ್ದ ದೂರಿನ ಮೇಲೆ ಡಾಖಾ ಪೊಲೀಸರು ಏಳು ಮಂದಿ ಅತ್ಯಾಚಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 376ರಡಿ ಕೇಸು ದಾಖಲಿಸಿದ್ದಾರೆ. ಮಹಿಳೆಯ ಪತಿಯ ವಿರುದ್ಧವೂ ಪೊಲೀಸರು ಐಪಿಸಿ ಸೆ.120 ಬಿ (ಕ್ರಿಮಿನಲ್ ಸಂಚು) ಪ್ರಕಾರ ಕೇಸು ದಾಖಲಿಸಿದ್ದಾರೆ.
22ರ ಹರೆಯದ ರೇಪ್ ಸಂತ್ರಸ್ತ ವಿವಾಹಿತೆಯು ಕೊಟ್ಟಿರುವ ದೂರಿನಲ್ಲಿ ಆರೋಪಿ ಪತಿಯೊಂದಿಗೆ ತನಗೆ 2011ರಲ್ಲಿ ಮದುವೆಯಾಗಿದ್ದು ಆತನಿಗೆ ತನಗೆ ಒಂದು ಮಗು ಇದೆ ಎಂದು ಹೇಳಿದ್ದಾಳೆ.
ಈ ಅತ್ಯಾಚಾರದ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವುದಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಎಸ್‌ಐ ನಗರ್ ಸಿಂಗ್ ತಿಳಿಸಿದ್ದಾರೆ.