ಕನ್ನಡದ ಮಕ್ಕಳಿಗೆ “ಸಂಧ್ಯಾ ಮಾಮಿ’ ಎಂದೇ ಪರಿಚಿತರಾಗಿರುವ ಡಾ. ಸಂಧ್ಯಾ ಎಸ್. ಪೈ. ಅವರು ಕನ್ನಡ ಸಾಹಿತ್ಯ ಪರಿಷತ್‌ನ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಮಣಿಪಾಲ್ ಮೀಡಿಯಾ ಸಮೂಹ ಹೊರತರುತ್ತಿರುವ ಕನ್ನಡದ ಜನಪ್ರಿಯ ವಾರಪತ್ರಿಕೆ “ತರಂಗ’, ಮಾಸಪತ್ರಿಕೆ “ತುಷಾರ’ದ ವ್ಯವಸ್ಥಾಪಕ ಸಂಪಾದಕಿ ಹಾಗೂ ಮಕ್ಕಳ ಕಥೆಪುಸ್ತಕ “ತುಂತುರು’ವಿನ ಸಂಪಾದಕಿಯಾಗಿರುವ ಸಂಧ್ಯಾ ಪೈ ಅವರದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು.
ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಕ್ಕಮಹಾದೇವಿ ಮಹಿಳಾ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿಗೆ ಭಾಜನರಾಗಿರುವ ಸಂಧ್ಯಾ ಪೈ ಅವರನ್ನು, ಕ.ಸಾ.ಪ. ಅತಿಥಿ ಸಾಧಕರನ್ನಾಗಿ ಆಹ್ವಾನಿಸಿ, ಗೌರವಿಸುತ್ತಿದೆ. ಪರಿಷತ್‌ನ ಅಧ್ಯಕ್ಷ ಡಾ. ಮನು ಬಳಿಗಾರ್, ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಲ್ಲಿ?: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಯಾವಾಗ?: ಫೆ. 23, ಸಂಜೆ 5.30