Advertisement
ಎಸ್‌ಡಿಆರ್‌ಎಫ್ ನಿಧಿಯಿಂದ ಈ ಹಣವನ್ನು ಬಳಕೆ ಮಾಡಲು ಹಣಕಾಸು ಇಲಾಖೆ ನಿರ್ಧರಿಸಿದ್ದು, ಕೇಂದ್ರ ಸರ್ಕಾರಕ್ಕೆ ಈಗಾಗಲೇ 18 ಸಾವಿರ ಕೋಟಿ ರೂ. ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿದೆ. “ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ರಾಜ್ಯ ಸರ್ಕಾರ ಅಭ್ಯಾಸ ಮಾಡಿಕೊಂಡಿದೆ. ಬರ ನಿರ್ವಹಣೆಗಾಗಿ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಬ್ಬರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
ಬೆಂಗಳೂರು ನಗರ – 7.5 ಕೋಟಿ ರೂ.
ಬೆಂಗಳೂರು ಗ್ರಾಮಾಂತರ- 6 ಕೋಟಿ ರೂ.
ರಾಮನಗರ- 7.5 ಕೋಟಿ ರೂ.
ಕೋಲಾರ- 9 ಕೋಟಿ ರೂ.
ಚಿಕ್ಕಬಳ್ಳಾಪುರ- 9 ಕೋಟಿ ರೂ.
ತುಮಕೂರು- 15 ಕೋಟಿ ರೂ.
ಚಿತ್ರದುರ್ಗ- 9 ಕೋಟಿ ರೂ.
ದಾವಣಗೆರೆ- 9 ಕೋಟಿ ರೂ.
ಚಾಮರಾಜನಗರ- 7.5 ಕೋಟಿ ರೂ.
ಮೈಸೂರು- 13.5 ಕೋಟಿ ರೂ.
ಮಂಡ್ಯ- 10.5 ಕೋಟಿ ರೂ.
ಬಳ್ಳಾರಿ- 7.5 ಕೋಟಿ ರೂ.
ಕೊಪ್ಪಳ- 10.5 ಕೋಟಿ ರೂ.
ರಾಯಚೂರು- 9 ಕೋಟಿ ರೂ.
ಕಲಬುರ್ಗಿ- 16.5 ಕೋಟಿ ರೂ.
ಬೀದರ್ – 4.5 ಕೋಟಿ ರೂ.
ಬೆಳಗಾವಿ – 22.5 ಕೋಟಿ ರೂ.
ಬಾಗಲಕೋಟೆ- 13.5 ಕೋಟಿ ರೂ.
ವಿಜಯಪುರ – 18 ಕೋಟಿ ರೂ.
ಗದಗ- 10.5 ಕೋಟಿ ರೂ.
ಹಾವೇರಿ – 12 ಕೋಟಿ ರೂ.
ಧಾರವಾಡ – 12 ಕೋಟಿ ರೂ.
ಶಿವಮೊಗ್ಗ – 10.5 ಕೋಟಿ ರೂ.
ಹಾಸನ- 12 ಕೋಟಿ ರೂ.
ಚಿಕ್ಕಮಗಳೂರು – 12 ಕೋಟಿ ರೂ.
ಕೊಡಗು – 7.5 ಕೋಟಿ ರೂ.
ದಕ್ಷಿಣ ಕನ್ನಡ – 3 ಕೋಟಿ ರೂ.
ಉಡುಪಿ- 4.5 ಕೋಟಿ ರೂ.
ಉತ್ತರ ಕನ್ನಡ – 16.5 ಕೋಟಿ ರೂ.
ಯಾದಗಿರಿ – 9 ಕೋಟಿ ರೂ.
ವಿಜಯನಗರ – 9 ಕೋಟಿ ರೂ.
Related Articles
Advertisement