Advertisement
ಪ್ರತೀ ಬೇಸಗೆಯಲ್ಲಿ ಹಸುರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಕೆಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೈನುಗಾರರ ಸಂಖ್ಯೆ ಯಲ್ಲಿ ಇಳಿಮುಖವಾಗಿದ್ದು, ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳು ಆಕ್ರ ಮಿಸಿರುವುದು ಹಾಲಿನ ಪ್ರಮಾಣ ಕಡಿಮೆಯಾಗಲು ಕಾರಣ. ಬೇರೆಡೆಯಿಂದ ಮೇವು ಖರೀದಿಸಿ ಹಸುಗಳಿಗೆ ನೀಡುವುದು ಲಾಭ ವಲ್ಲ. ಸ್ವಂತ ಜಾಗದ ಅಲಭ್ಯತೆ ಇತ್ಯಾದಿ ಕಾರಣದಿಂದ ದಿನೇದಿನೆ ಹಾಲಿನ ಪ್ರಮಾಣ ಇಳಿಕೆಯಾಗುತ್ತಿದೆ.
Related Articles
Advertisement
ಎಷ್ಟು ಸಂಘ?ದ.ಕ., ಉಡುಪಿ ಜಿಲ್ಲೆಯಲ್ಲಿ 744 ಹಾಲಿನ ಸೊಸೈಟಿಗಳಿವೆ. 53 ಸಾವಿರ ಸದಸ್ಯರು ಸೊಸೈಟಿಗೆ ಹಾಲು ನೀಡುತ್ತಿದ್ದಾರೆ. ಎಲ್ಲಿಂದ ಖರೀದಿ?
ಹೆಚ್ಚುವರಿ 2 ಲಕ್ಷ ಲೀಟರ್ ಹಾಲನ್ನು ಅಗತ್ಯವಿರುವ ಹೆಚ್ಚುವರಿ 2 ಲಕ್ಷ ಲೀ. ಹಾಲನ್ನು ಮಂಡ್ಯ, ಶಿವಮೊಗ್ಗ, ಮೈಸೂರು, ಹಾಸನ ಒಕ್ಕೂಟಗಳಿಂದ ಅಂತರ್ ಡೈರಿ ದರದಲ್ಲಿ ಖರೀದಿಸಲಾಗುತ್ತದೆ. ಒಕ್ಕೂಟ ಇಲ್ಲಿ ಹೈನುಗಾರರಿಂದ ಖರೀದಿ ಸುವ ದರಕ್ಕಿಂತಲೂ 48 ಪೈಸೆಗಳಷ್ಟು ಇದು ಕಡಿಮೆ. ಸಾಗಾಟ ವೆಚ್ಚ ಪ್ರತ್ಯೇಕ. ಎಷ್ಟು ಹಾಲು?
ಮೇ 13ರಂದು 3.57 ಲಕ್ಷ ಲೀ. ಹಾಲು ಸಂಗ್ರಹವಾಗಿದ್ದು ಮೇ 7ರಂದು 3.45 ಲಕ್ಷ ಲೀ.ನಲ್ಲಿತ್ತು. ಅದಕ್ಕೂ ವಾರದ ಹಿಂದೆ 3.3 ಲಕ್ಷ ಲೀ.ಗಳಲ್ಲಿದ್ದ ಹಾಲಿನ ಪ್ರಮಾಣ 4 ತಿಂಗಳಿನಿಂದ ಏರಿಕೆಯಾಗಿ ಈ ಹಂತ ತಲುಪಿದೆ. 2020ರಲ್ಲಿ 5 ಲಕ್ಷ ಲೀ., 2018ರಲ್ಲಿ 4.8 ಲಕ್ಷ ಲೀ., 2017ರಲ್ಲಿ 3.96 ಲಕ್ಷ ಲೀ., 2015ರಲ್ಲಿ 3.76 ಲಕ್ಷ ಲೀ., 2014ರಲ್ಲಿ 3.6 ಲಕ್ಷ ಲೀ.ಗಳಷ್ಟಿತ್ತು. ಪ್ರತೀ ದಿನ 4.24 ಲಕ್ಷ ಲೀ. ಹಾಲು ಮಾರಾಟಕ್ಕೆ ಬೇಕು. ಜತೆಗೆ ಹಾಲಿನ ಇತರ ಉತ್ಪನ್ನಗಳಿಗೂ ಹಾಲಿನ ಅಗತ್ಯವಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಕಳೆದ 4 ತಿಂಗಳಿನಿಂದ 27 ಸಾವಿರ ಲೀ. ಹಾಲು ಉತ್ಪಾದನೆ ಏರಿಕೆಯಾಗಿದೆ. ಒಕ್ಕೂಟದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
– ಕೆ.ಪಿ. ಸುಚರಿತ ಶೆಟ್ಟಿ,
ಅಧ್ಯಕ್ಷ, ದ.ಕ. ಹಾಲು ಒಕ್ಕೂಟ