Advertisement
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿ ನೀರಿಲ್ಲದೆ ಹಾಗೂ ವಿವಿಧ ರೋಗಳಿಗೆ ತುತ್ತಾಗಿ 2.28 ಕೋಟಿ ತೆಂಗು ಮತ್ತು ಅಡಕೆ ಮರಗಳು ಒಣಗಿದ್ದು, 45 ಲಕ್ಷ ತೆಂಗು, 1.83 ಕೋಟಿ ಅಡಕೆ ಮರಗಳಲ್ಲಿ ಫಸಲು ನಷ್ಟವಾಗಿದೆ. ಆ ಪೈಕಿ ಶೇ.50 ಮರಗಳು ಬೇರು ಸಹಿತ ಜೀವ ಕಳೆದುಕೊಂಡಿವೆ. ಇದೇ ಪರಿಸ್ಥಿತಿ ಮುಂದುವರಿದರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವರಗಳನ್ನು ಒಳಗೊಂಡಂತೆ ವರದಿ ತರಿಸಿ, ಇನ್ನೊಂದು ವಾರದಲ್ಲಿ ದೆಹಲಿಗೆ ಹೋಗಿ ಪ್ರತಿ ಹೆಕ್ಟೇರ್‌ಗೆ 75 ಸಾವಿರ ರೂ. ಪರಿಹಾರಕ್ಕೆ ಕೇಂದ್ರ ಸರ್ಕಾರದೆದುರು ಬೇಡಿಕೆ ಇಡಲಿದ್ದೇವೆ ಎಂದು ತಿಳಿಸಿದರು.
Related Articles
Advertisement
14ಕ್ಕೆ ಸರ್ವಪಕ್ಷ ಸಭೆಕಾವೇರಿ ವ್ಯಾಪ್ತಿಯ ಜಲಾಶಯಗಳಲ್ಲಿ ನೀರು ಕಡಿಮೆ ಇರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಗಸ್ಟ್ 14 ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಅದಕ್ಕೂ ಮುನ್ನ ಬುಧವಾರ (ಆ.9) ರಂದು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದು ವಸ್ತುಸ್ಥಿತಿಯನ್ನು
ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಮಧ್ಯೆ ಆ.9ರಂದು ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಾದ ಮಂಡಿಸಲಿದ್ದು, ಆನಂತರ ರಾಜ್ಯದ ನಿಲುವು ವ್ಯಕ್ತಪಡಿಸಲು ಮತ್ತೂಂದು ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು. ಹೆದ್ದಾರಿ ಬದಿಯಲ್ಲಿ ಬರುವ ಮದ್ಯದ ಅಂಗಡಿ ಬಂದ್ ಹಾಗೂ ನಗರ ಮಧ್ಯಭಾಗದಲ್ಲಿ ಹಾದು ಹೋಗಿರುವ ಹೆದ್ದಾರಿಗಳ ಅಕ್ಕ-ಪಕ್ಕದ ಮದ್ಯದ ಅಂಗಡಿ ಬಂದ್ ವಿಷಯದಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರ ಏನು ಮಾಡಬಹುದೋ ಅದೆಲ್ಲವನ್ನೂ ಮಾಡಿದೆ. ಒಟ್ಟಾರೆ ಮದ್ಯದ ಅಂಗಡಿಗಳ ಪೈಕಿ ಶೇ.5 ರಷ್ಟು ಮಾಲೀಕರು ನ್ಯಾಯಲಯದ ಮೊರೆ ಹೋಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.