Advertisement

ಶಾಲೆ ತೊರೆಯುವ ಬಾಲಕಿಯರ ಪ್ರಮಾಣ ಇಳಿಕೆ

11:51 PM Dec 15, 2022 | Team Udayavani |

ಹೊಸದಿಲ್ಲಿ: ಶಾಲೆ ತೊರೆಯುವ ಬಾಲಕಿಯರ ಸಂಖ್ಯೆ 2014 ರಿಂದ ಈಚೆಗೆ ಕಡಿಮೆಯಾಗಿದ್ದು, ಸ್ನಾತಕೋತ್ತರ ಕೋರ್ಸ್‌ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಹೇಳಿದ್ದಾರೆ.

Advertisement

ಶಾಲೆ ತೊರೆಯುವ ಬಾಲಕಿಯರ ಸಂಖ್ಯೆ 2014ರಲ್ಲಿ ಶೇ. 17 ಇದ್ದುದು ಈಗ ಶೇ. 13ಕ್ಕೆ ಇಳಿದಿದೆ ಎಂದು ಸಂಸತ್ತಿನ ಹೊರಗೆ ಮಾಧ್ಯಮದವರಿಗೆ ಅವರು ತಿಳಿಸಿ ದ್ದಾರೆ. ದೇಶಕ್ಕೆ ಅಗತ್ಯವಿರುವಷ್ಟು ವೈದ್ಯರನ್ನು ತಯಾರು ಮಾಡಲು ಮತ್ತು ವೈದ್ಯಕೀಯ ಕಲಿಕೆಗೆ ವಿದೇಶಗಳಿಗೆ ತೆರಳುವಂಥ ಪರಿಸ್ಥಿತಿ ತೊಲಗಿಸಲು ಕೇಂದ್ರ ಸರಕಾರ ಬದ್ಧ ಎಂದರು.

ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿರುವುದು ಬಾಲಕಿಯರು ಶಾಲೆ ತೊರೆಯದಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next