ಟೆಲ್ ಅವೀವ್ : ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್, ದಕ್ಷಿಣ ಹೈಫಾದ ಸಿಸೇರಿಯಾದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಬಳಿ ಶನಿವಾರ ಸ್ಫೋಟಗೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಗಾಜಾದಲ್ಲಿ ಇಸ್ರೇಲ್ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ನನ್ನ ಇಸ್ರೇಲಿ ಪಡೆಗಳು ಹೊಡೆದುರುಳಿಸಿದ ಎರಡು ದಿನಗಳ ನಂತರ ನಡೆದ ದಾಳಿಯ ಸಮಯದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ನಿವಾಸದಲ್ಲಿ ಇರಲಿಲ್ಲ ಎಂದು ಪ್ರಧಾನಿ ವಕ್ತಾರರು ತಿಳಿಸಿದ್ದಾರೆ.
ಲೆಬನಾನ್‌ನಿಂದ ಹಾರಿಸಲಾದ ಇತರ ಎರಡು ಡ್ರೋನ್‌ಗಳನ್ನು ವಾಯು ಮಾರ್ಗದಲ್ಲೇ ಹೊಡೆದುರುಳಿಸಲಾಗಿದೆ, ಟೆಲ್ ಅವಿವ್ ಪ್ರದೇಶದಲ್ಲಿ ಸೈರನ್‌ಗಳನ್ನು ಮೊಳಗಿವೆ. ಆದಾಗ್ಯೂ, ಮೂರನೆಯದು ಸಿಸೇರಿಯಾದ ಕಟ್ಟಡಕ್ಕೆ ಅಪ್ಪಳಿಸಿ ದೊಡ್ಡ ಸ್ಫೋಟಕ್ಕೆ ಕಾರಣವಾಗಿದೆ.
ಡ್ರೋನ್ ದಾಳಿಯಲ್ಲಿ ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿದೆ ಆದರೆ, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಡ್ರೋನ್ ಲೆಬನಾನ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸಿಸೇರಿಯಾದ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.
ಯಾಹ್ಯಾ ಸಿನ್ವಾರ್‌ನ ಹತ್ಯೆಯು ಗಾಜಾ ಪಟ್ಟಿಯ ಪ್ಯಾಲೇಸ್ತೀನ್ ಭೂಪ್ರದೇಶದಲ್ಲಿ ವರ್ಷವಿಡೀ ನಡೆದ ಯುದ್ಧದ “ಅಂತ್ಯದ ಆರಂಭ” ಎಂದು ಬೆಂಜಮಿನ್ ನೆತನ್ಯಾಹು ಅವರು ಗುರುವಾರ (ಅ 17) ಹೇಳಿಕೆ ನೀಡಿದ್ದರು.