Advertisement

LOC, LAC ಗೆ ಡ್ರೋನ್‌ ಕಾವಲು: IAF ಗೆ ಸಿಕ್ಕಿತು ಹೆರಾನ್‌ ಮಾರ್ಕ್‌-2 ಬಲ

09:13 PM Aug 13, 2023 | Team Udayavani |

ಹೊಸದಿಲ್ಲಿ, ಆ. 13: ಪಾಕಿಸ್ಥಾನ ಮತ್ತು ಚೀನಗಳ ತಂಟೆಯನ್ನು ಗಮನದಲ್ಲಿ ಇರಿಸಿಕೊಂಡು ಸುಧಾರಿತ ಆವೃತ್ತಿಯ ಹೆರಾನ್‌ ಮಾರ್ಕ್‌-2 ಡ್ರೋನ್‌ಗಳನ್ನು ಐಎಎಫ್ಗೆ ರವಿವಾರ ಸೇರ್ಪಡೆ ಮಾಡಲಾಗಿದೆ. ಜಮ್ಮು -ಕಾಶ್ಮೀರದ ಉತ್ತರ ಭಾಗದಲ್ಲಿ ಅದನ್ನು ನಿಯೋಜಿಸಲಾಗಿದೆ. ಪಾಕ್‌-ಚೀನ ಸೇನೆಗಳ ಚಲನವನಗಳ ಮೇಲೆ ನಿಗಾ ಇರಿಸಲು ರಕ್ಷಣ ಪಡೆಗಳಿಗೆ ಇದು ನೆರವಾಗಲಿದೆ. ಶನಿವಾರವಷ್ಟೇ ಶ್ರೀನಗರ ವಾಯುನೆಲೆಯಲ್ಲಿ ಮೇಲ್ದರ್ಜೆಗೆ ಏರಿಸಿದ ಮಿಗ್‌-29 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಲಾಗಿತ್ತು.

Advertisement

“ವಾರ್ಡನ್‌ ಆಫ್ ನಾರ್ತ್‌’ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಹೆರಾನ್‌ ಮಾರ್ಕ್‌-2 ಡ್ರೋನ್‌ಗಳು ಲೇಸರ್‌ ತಂತ್ರಜ್ಞಾನದ ನೆರವಿನಿಂದ ಶತ್ರುವಿನ ನೆಲೆ ಗುರುತಿಸಿ, ಯುದ್ಧ ವಿಮಾನಗಳಿಗೆ ಅವುಗಳನ್ನು ಛೇದಿಸಲು ನೆರವು ನೀಡಲಿವೆ. ಉಪಗ್ರಹದ ಲಿಂಕ್‌ ಒದಗಿಸಲಾಗಿರುವುದರಿಂದ ದುರ್ಗಮ ಪ್ರದೇಶದಲ್ಲಿ ಇರುವ ಶತ್ರು ನೆಲೆಯನ್ನೂ ಗುರುತಿಸಲಿವೆ.
ಯಾವುದೇ ಪ್ರದೇಶದ ಮೇಲೆ ಹಾರಾಟ ನಡೆಸಿ ಮಾಹಿತಿ ಸಂಗ್ರಹ, ಪ್ರತಿಕೂಲ ಹವಾಮಾನಗಳಲ್ಲಿಯೂ ಸತತ 36 ತಾಸು ಕಾರ್ಯನಿರ್ವಹಿಸುವವ ಸಾಮರ್ಥ್ಯ ಹೆರಾನ್‌ ಮಾರ್ಕ್‌-2ಗೆ ಇದೆ. ಪಾಕ್‌ ಮತ್ತು ಚೀನ ಗಡಿ ದಾಟದೆಯೇ ಅವುಗಳ ಚಿತಾವಣೆಯನ್ನು ತಿಳಿಯುವ ಸಾಮರ್ಥ್ಯ ಈ ಡ್ರೋನ್‌ಗಳಿಗೆ ಇದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಸಾಮರ್ಥ್ಯ
– ಯುದ್ಧ ಟ್ಯಾಂಕ್‌ ಧ್ವಂಸಗೊಳಿಸುವ ಕ್ಷಿಪಣಿ
– ಬಾಂಬ್‌ಗಳು
– ಶತ್ರು ನೆಲೆ ಧ್ವಂಸಗೊಳಿಸುವ ಕ್ಷಿಪಣಿ
– 35 ಸಾವಿರ ಅಡಿ- ಇಷ್ಟು ಎತ್ತರದ ವರೆಗೆ ಹಾರುವ ಸಾಮರ್ಥ್ಯ

04- ನಿಯೋಜಿಸಿರುವ ಡ್ರೋನ್‌ಗಳು
36 ತಾಸು- ಸತತ ಹಾರಾಟದ ಸಾಮರ್ಥ್ಯ

ಅತ್ಯಂತ ಹೆಚ್ಚಿನ ಆಧುನಿಕ ತಂತ್ರಜ್ಞಾನ ಈ ಡ್ರೋನ್‌ಗಳಲ್ಲಿದೆ. ಪೇಲೋಡ್‌ಗಳ ಸಹಿತ ಹಲವು ವ್ಯವಸ್ಥೆಗಳಿಂದಾಗಿ ಎಂಥ ಸಂದರ್ಭದಲ್ಲಿಯೂ ಕಾರ್ಯನಿರ್ವಹಿಸಬಲ್ಲವು.
ಸ್ಕ್ವಾ|ಲೀ| ಅರ್ಪಿತ್‌ ಟಂಡನ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next