Advertisement

ಮುಂಬಯಿ ರೈಲ್ವೇ ನಿಲ್ದಾಣಗಳಿಗೆ ಡ್ರೋನ್‌ಗಳ ಭದ್ರತೆ

09:58 AM Aug 20, 2020 | sudhir |

ಹೊಸದಿಲ್ಲಿ: ಭಾರತೀಯ ರೈಲ್ವೇಗೂ ಈಗ ಡ್ರೋನ್‌ಗಳ ಕಣ್ಗಾವಲು! ಮುಂಬಯಿಯ ಕೇಂದ್ರ ವಿಭಾಗದ ಪ್ರದೇಶ ನಿಲ್ದಾಣಗಳ ಭದ್ರತೆಗೆ ಎರಡು ನಿಂಜಾ ಯುಎವಿಗಳನ್ನು ರೈಲ್ವೇ ಇಲಾಖೆ ಇತ್ತೀಚೆಗೆ ಖರೀದಿಸಿದೆ.

Advertisement

ಮುಂಬಯಿಯ ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ನ (ಆರ್‌ಪಿಎಫ್) ನಾಲ್ವರು ಸಿಬಂದಿಗೆ ಡ್ರೋನ್‌ ಹಾರಾಟ, ಕಣ್ಗಾವಲು ಮತ್ತು ನಿರ್ವಹಣೆಗಾಗಿ ತರಬೇತಿ ನೀಡಲಾಗಿದೆ. ಈ ಡ್ರೋನ್‌ಗಳು ನೈಜ ಸಮಯದ ಟ್ರ್ಯಾಕಿಂಗ್‌, ವೀಡಿಯೋ ಸ್ಟ್ರೀಮಿಂಗ್‌, ಸ್ವಯಂಚಾಲಿತ ಸೇಫ್ ಮೋಡ್‌ ಸಾಮರ್ಥ್ಯವನ್ನು ಹೊಂದಿವೆ.

ಮತ್ತಷ್ಟು ಡ್ರೋನ್‌: ರೈಲ್ವೇ ಭದ್ರತೆಯ ಉದ್ದೇಶ ಕ್ಕಾಗಿ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲು ಆರ್‌ಪಿಎಫ್ ಯೋಜಿಸಿದೆ. ಆಗ್ನೇಯ, ನೈಋತ್ಯ, ಸೆಂಟ್ರಲ್‌ ರೈಲ್ವೇ, ಮಾಡರ್ನ್ ಕೋಚಿಂಗ್‌ ಫ್ಯಾಕ್ಟರಿ ಕೇಂದ್ರಗಳ ರಕ್ಷಣೆಗಾಗಿ 9 ಡ್ರೋನ್‌ಗಳ ಖರೀದಿ ಬಹುತೇಕ ಮುಕ್ತಾಯ ಕಂಡಿದೆ. ರೈಲ್ವೇ ಇಲಾಖೆ ಇದಕ್ಕಾಗಿ ಒಟ್ಟು 31.87 ಲಕ್ಷ ರೂ. ವಿನಿ ಯೋಗಿಸಿದೆ.

ಭವಿಷ್ಯದಲ್ಲಿ ಇನ್ನೂ 17 ಡ್ರೋನ್‌ಗಳನ್ನು 97.52 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತಿದೆ. ಇದಕ್ಕಾಗಿ 19 ಆರ್‌ಪಿಎಫ್ ಸಿಬಂದಿಗೆ ಡ್ರೋನ್‌ ಕಾರ್ಯಾ ಚ ರಣೆಯ ತರಬೇತಿಯನ್ನೂ ನೀಡಲಾ ಗುತ್ತಿದೆ. ಇದ ರಲ್ಲಿ 4 ಮಂದಿ ಡ್ರೋನ್‌ ಹಾರಾಟಕ್ಕೆ ಪರವಾನಿಗೆ ಪಡೆದಿದ್ದಾರೆ.

ರೈಲ್ವೇ ಗೂಡ್ಸ್‌ಗೆ “ಪಿಜ್ಜಾ ಡೆಲಿವರಿ ಮಾದರಿ’
ಸರಕು ಸಾಗಣೆ ಆದಾಯದಲ್ಲಿ ಹೆಚ್ಚಳ ತರಲು ರೈಲ್ವೇ ಇಲಾಖೆ ಪಿಜ್ಜಾ ವಿತರಣ ಮಾದರಿ ಅಳ ವಡಿಕೆಗೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿ ಸಿವೆ. ನಿಶ್ಚಿತ ಸಮಯದಲ್ಲಿ ಸರಕು ಸಾಗಣೆ ಸಾಧ್ಯ ವಾಗದೆ ಇದ್ದರೆ, ವಿಳಂಬಕ್ಕೆ ಪರಿಹಾರ ನೀಡಲು ನಿರ್ಧರಿಸಲಾಗುತ್ತಿದೆ.

Advertisement

ಉದಾ: ಮುಂಬಯಿಯಿಂದ ಬೆಂಗಳೂರಿಗೆ 72 ಗಂಟೆಯೊಳಗೆ ಸರಕು ತಲುಪಿಸಲು ಸಾಧ್ಯವಾಗ ದಿದ್ದರೆ, ವಿಳಂಬವಾದ ಪ್ರತಿ ಗಂಟೆಗೆ ನಷ್ಟ ಪರಿ ಹಾರ ವನ್ನು ಇಲಾಖೆ ಕಡೆಯಿಂದ ತುಂಬಿ ಕೊಡಲು ಚಿಂತಿಸಲಾಗುತ್ತಿದೆ. 2021ರ ವೇಳೆಗೆ ಈ ನೀತಿ ಜಾರಿಯ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next