Advertisement

Nagpur RSS ಕಚೇರಿ ಸುತ್ತ ಮಾ.28ರ ವರೆಗೆ ಡ್ರೋನ್‌ಗೆ ನಿಷೇಧ

12:16 AM Jan 30, 2024 | Team Udayavani |

ನಾಗಪುರ: ಸಾಂಭವ್ಯ ಬೆದರಿಕೆ ಹಿನ್ನೆಲೆ ಯಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಪ್ರಧಾನ ಕಚೇರಿ ಹಾಗೂ ಸುತ್ತಮುತ್ತಲು ಮಾ.28ರವರೆಗೆ ಡ್ರೋನ್‌ ಹಾರಾಟ, ಫೋಟೋಗ್ರಫಿ ಮತ್ತು ವೀಡಿಯೋಗ್ರಫಿಯನ್ನು ನಿಷೇಧಿಸಿ ನಾಗಪುರ ಪೊಲೀಸ್‌ ಆದೇಶ ಹೊರಳಿಸಿದೆ.

Advertisement

“ನಾಗಪುರ ನಗರದ ಮಹಾಲ್‌ ಪ್ರದೇ ಶದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇ ರಿಯು ಜನನಿಬಿಡ ಪ್ರದೇಶದಲ್ಲಿದೆ. ಸುತ್ತಮುತ್ತಲು ಹೊಟೇಲ್‌ಗ‌ಳು, ಲಾಡ್ಜ್ ಗಳು ಮತ್ತು ಕೋಚಿಂಗ್‌ ಸೆಂಟರ್‌ಗಳಿಂದ ಆವರಿಸಿದೆ. ಸಾಂಭವ್ಯ ಬೆದರಿಕೆ ಹಿನ್ನೆಲೆಯಲ್ಲಿ ಕಚೇರಿಯ ಸುತ್ತಮುತ್ತಲು ಡ್ರೋನ್‌ ಹಾರಾಟವನ್ನು ನಿಷೇಧಿಸಲಾ ಗಿದೆ. ಅಲ್ಲದೇ ಕಚೇರಿಯ ಫೋಟೋ ತೆಗೆಯುವುದನ್ನು ಮತ್ತು ವೀಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಜ.29ರಿಂದ ಮಾ.28ರ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ನಾಗಪುರ ಜಂಟಿ ಪೊಲೀಸ್‌ ಆಯುಕ್ತ ಅಶ್ವಥಿ ದೊರೆj ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next