Advertisement
ರಾತ್ರಿ 1.37ಕ್ಕೆ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಕಟ್ಟಡದ ಛಾವಣಿಯಲ್ಲಿ ಮೊದಲ ಸ್ಫೋಟವಾಗಿದೆ. 1.42ಕ್ಕೆ ಎರಡನೇ ಸ್ಪೋಟ ನಡೆದಿದೆ. ಸ್ಪೋಟದಿಂದಾಗಿ ಯಾವುದೇ ಸಾವು ನೋವು ಹಾನಿ ಸಂಭವಿಸಿಲ್ಲ.
Related Articles
Advertisement
ಸ್ಫೋಟಗಳ ಬಗ್ಗೆ ಮಾಹಿತಿ ತಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯು ಸಿಬ್ಬಂದಿ ಉಪ ಮುಖ್ಯಸ್ಥ ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರೊಂದಿಗೆ ಘಟನೆ ಕುರಿತು ಮಾತನಾಡಿದರು.
ಡ್ರೋನ್ ದಾಳಿ ಶಂಕೆ: ವಿಮಾನ ನಿಲ್ದಾಣದ ಉನ್ನತ ಭದ್ರತಾ ವಲಯದೊಳಗೆ ಐಇಡಿ ಪೇಲೋಡ್ ಹಾಕಲು ಡ್ರೋನ್ ಬಳಸಲಾಗಿದೆಯೇ ಎಂದು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಈ ಡ್ರೋನ್‌ಗಳನ್ನು ರಾಡಾರ್‌ಗಳು ಪತ್ತೆ ಮಾಡುವುದಿಲ್ಲ. ಹಾಗಾಗಿ ರಾಡಾರ್ ಕಣ್ಣು ತಪ್ಪಿಸಿ ಒಳಬಂದಿರುವ ಸಾಧ್ಯತೆಯಿದೆ.
ಇದನ್ನೂ ಓದಿ: ದೇಶದಲ್ಲಿ 50 ಸಾವಿರ ಹೊಸ ಸೋಂಕು ಪ್ರಕರಣಗಳು ಪತ್ತೆ, 57 ಸಾವಿರ ಸೋಂಕಿತರು ಗುಣಮುಖ
ಭಾರತ-ಪಾಕಿಸ್ತಾನ ಗಡಿಯು ಈ ವಾಯುಪಡೆ ನಿಲ್ದಾಣದಿಂದ ಕೇವಲ 14 ಕಿ.ಮೀ ದೂರದಲ್ಲಿದೆ. ಈ ಹಿಂದೆಯೂ ಡ್ರೋನ್‌ಗಳನ್ನು ಬಳಸಿ ಭಾರತದ ಭೂಪ್ರದೇಶದೊಳಗೆ 12 ಕಿ.ಮೀ.ವರೆಗೆ ಶಸ್ತ್ರಾಸ್ತ್ರಗಳನ್ನು ಡ್ರಾಪ್ ಮಾಡಿದ್ದ ಘಟನೆ ನಡೆದಿತ್ತು.
ಪ್ರತ್ಯೇಕ ಘಟನೆಯಲ್ಲಿ ಜಮ್ಮು ಪೊಲೀಸರು ಭಾನುವಾರ ಇಬ್ಬರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ್ದಾರೆ. ಈ ಇಬ್ಬರ ಬಂಧನಕ್ಕೂ, ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.