ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಡ್ರೋನ್ ಹಾರಾಟ ಭಾರೀ ಸದ್ದು ಮಾಡುತ್ತಿದೆ. ವಾಯು ಪಡೆ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯ ಬಳಿಕ ಮತ್ತೆ ಹಲವಾರು ಡ್ರೋನ್ ಗಳು ಹಾರಾಟ ನಡೆಸುತ್ತಿರುವುದು ಪತ್ತೆಯಾಗುತ್ತದೆ. ಇದೀಗ ಇಂದು ಮುಂಜಾನೆ ಗಡಿ ಭಾಗದಲ್ಲಿ ಡ್ರೋನ್ ಪತ್ತೆಯಾಗಿದ್ದು, ಯೋಧರು ಹಿಮ್ಮೆಟ್ಟಿಸಿದ್ದಾರೆ.
ಭಾರತ- ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಈ ಡ್ರೋನ್ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಮುಂಜಾನೆ 4.25 ರ ಸುಮಾರಿಗೆ ಸಣ್ಣ ಹೆಕ್ಸಾಕಾಪ್ಟರ್ ( ಆರು ರೆಕ್ಕೆಯ ಡ್ರೋನ್) ಪಾಕಿಸ್ಥಾನ ಗಡಿಯಿಂದ ಭಾರತದೊಳಗೆ ಬರಲು ಪ್ರಯತ್ನ ನಡೆಸಿತ್ತು. ಕೂಡಲೇ ಎಚ್ಚೆತ್ತ ಭಾರತೀಯ ಯೋಧರು ಅದರತ್ತ ಕೆಲವು ಸುತ್ತುಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಕೂಡಲೇ ಡ್ರೋನ್ ಹಿಂದೆ ತೆರಳಿದೆ ಎಂದು ಬಿಎಸ್ ಎಫ್ ಮೂಲಗಳು ತಿಳಿಸಿದೆ.
ಡ್ರೋನ್ ಭಾರತದ ಗಡಿಭಾಗದ ಓಳಗೆ ಬರಲು ಪ್ರಯತ್ನಿಸಿತ್ತು, ಆದರೆ ಯೋಧರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೆಲವೇ ದಿನದಲ್ಲಿ ಕೇಂದ್ರ ಸಂಪುಟ ವಿಸ್ತರಣೆ: ಯಾರೆಲ್ಲಾ ಇದ್ದಾರೆ ರೇಸ್ ನಲ್ಲಿ?
ಕಳೆದ ಭಾನುವಾರ ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ನಡೆದ ದಾಳಿಯ ಬಳಿಕ ಸತತವಾಗಿ ಡ್ರೋನ್ ಪತ್ತೆಯಾಗುತ್ತಿದೆ. ರವಿವಾರದ ಘಟನೆಯ ಬಳಿಕ ಇದುವರೆಗೆ ಏಳು ಡ್ರೋನ್ ಗಳು ಪತ್ತೆಯಾಗಿದೆ.