Advertisement

ಡ್ರೈವಿಂಗ್‌: ಅಂಗವಿಕಲ ಕ್ರೀಡಾಪಟು ನಿರಂಜನ್‌ ರಾಷ್ಟ್ರೀಯ ದಾಖಲೆ

10:07 AM Sep 08, 2017 | |

ಬೆಂಗಳೂರು: ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌ ಎಕ್ಸ್‌ ಪೆಡಿಷನ್‌ ಕಾರ್‌ ರೇಸ್‌ನಲ್ಲಿ ರಾಜ್ಯದ ಅಂಗವಿಕಲ ಈಜು ಪಟು ನಿರಂಜನ್‌ ಮುಕುಂದ್‌ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ.

Advertisement

ಚೆನ್ನೈನಿಂದ ಮುಂಬೈ ಬಳಿಕ ಡೆಲ್ಲಿ ನಂತರ ಕೋಲ್ಕತಾಗೆ ಮರಳಿ ಬಳಿಕ ಚೆನ್ನೈಗೆ ರಸ್ತೆ ಮೂಲಕ ಕಾರು ಚಲಾಯಿಸುವ ಗುರಿಯನ್ನು ನೀಡಲಾಗಿತ್ತು. ನಿರಂ ಜನ್‌ ಒಟ್ಟು 124 ಗಂಟೆಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಇದ್ದ 130 ಗಂಟೆಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ತಿಂಗಳ ಹಿಂದೆ ರೇಸ್‌ ನಡೆದಿತ್ತು. ಆದರೆ ರಾಷ್ಟ್ರೀಯ ದಾಖಲೆ ಆಗಿರುವುದು ಈಗಷ್ಟೇ ಪ್ರಕಟವಾಗಿದೆ. ಕೂಟದ ಆಯೋಜಕರು ಸಮಗ್ರವಾಗಿ ಪರಿಶೀಲನೆ ನಡೆಸಿದ ಬಳಿಕ ಇವರು ದಾಖಲೆ ಮಾಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ನಿರಂಜನ್‌ ಕಿರಿಯರ ಈಜು ಕೂಟದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರು. ಅಲ್ಲದೆ ಏಷ್ಯನ್‌ ಗೇಮ್ಸ್‌ ಸೇರಿದಂತೆ ಹಲವು ಈಜು ಕೂಟದಲ್ಲಿ ಪದಕ ಗೆದ್ದು ಗಮನ ಸೆಳೆದಿದ್ದಾರೆ. ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಹಾಗೂ ಏಕಲವ್ಯ ಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next