ಗೋಣಿಕೊಪ್ಪಲು: ಅರುವತ್ತೋಕ್ಲು, ಹಾತೂರು, ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮರುಡಾಮರು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಭುಮಿ ಪೂಜೆ ನೆರೆವೇರಿಸಿದ ಶಾಸಕರು ಶೀಘ್ರವಾಗಿ ಕಾಮಗಾರಿಗಳು ಪೂರ್ಣಗೊಳ್ಳಲು ಗುತ್ತಿಗೆದಾರರು ಮುಂದಾಗಬೇಕು ಮತ್ತು ಸ್ಥಳೀಯ ಗ್ರಾಮಸ್ಥರು ರಸ್ತೆ ನಿಮಾರ್ಣದ ಸಂದರ್ಭ ಚರಂಡಿ ವ್ಯವಸ್ಥೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಗೋಣಿಕೊಪ್ಪ ಗ್ರಾ.ಪಂ ವ್ಯಾಪ್ತಿಯ 40 ಲಕ್ಷ ಅನುದಾನದಲ್ಲಿ ಜೂಸ್ ಪ್ಯಾಕ್ಟರಿ, ಪಡಿಕಲ್ ಸಂಪರ್ಕ ರಸ್ತೆ ಹತ್ತು ಲಕ್ಷ ವೆಚ್ಚದಲ್ಲಿ, ಉಮಾಮಹೇಶ್ವರಿ ಬಡಾವಣೆಯಿಂದ ಮುತ್ತಣ್ಣ ಬಡಾವಣೆ ಸಂಪರ್ಕ ರಸ್ತೆಗೆ ಹತ್ತು ಲಕ್ಷ, ಕೈಕೇರಿ ಪರಿಶಿಷ್ಠ ಕಾಲೋನಿ ರಸ್ತೆಯಿಂದ ಅರುವತ್ತೋಕ್ಲು ಲಿಂಕ್ ರಸ್ತೆಗೆ ಹತ್ತು ಲಕ್ಷ ಮತ್ತು ಕುಪ್ಪಂಡ ದೊಡ್ಡಮನೆ ರಸ್ತೆಗೆ ಹತ್ತು ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ನಡೆಯಲಿದೆ.
ಅರುವತ್ತೋಕ್ಲು ಗ್ರಾ.ಪಂ ವ್ಯಾಪ್ತಿಯ 30 ಲಕ್ಷ ಅನುದಾನದಲ್ಲಿ ಮುಖ್ಯ ರಸ್ತೆಯಿಂದ ಕೈಕೇರಿ ಮುಖ್ಯ ರಸ್ತೆ ಸಂಪರ್ಕ ಹತ್ತು ಲಕ್ಷ, ಮೈಸೂರಮ್ಮ ಕಾಲೋನಿ ಮುಖ್ಯ ರಸ್ತೆ ಅಭಿವೃದ್ಧಿಗೆ ಹತ್ತು ಲಕ್ಷ, ಹುದ್ದೂರು ಸೀತ ಕಾಲೋನಿ ಮುಖ್ಯ ರಸ್ತೆ ಅಭಿವೃದ್ಧಿ ನಡೆಯಲಿದೆ.
ಹಾತೂರು ಗ್ರಾ.ಪಂ ವ್ಯಾಪ್ತಿಯ 30 ಅನುದಾನದಲ್ಲಿ ಬೈಗೋಡು ಶಾಲೆ ಸಮೀಪದಿಂದ ಕೊಳೊ¤àಡಿಗೆ ಸಂಪರ್ಕ ರಸ್ತೆ ಹತ್ತು ಲಕ್ಷ, ಮತ್ತು ಒಕ್ಕಲಿಗರ ಕೇರಿಗಾಗಿ ಕಬ್ಬೆ ಮನೆ ಲಿಂಕ್ ರಸ್ತೆ ಹತ್ತು ಲಕ್ಷ, ಗದ್ದೆಮನೆ, ನೆಲ್ಲುಕೋಟೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಅರುವತ್ತೋಕ್ಲು ಸ್ಥಾನೀಯ ಸಮಿತಿ ಅಧ್ಯಕ್ಷ ಸೋಮಣ್ಣ, ಗ್ರಾಮಸ್ಥರಾದ ಮುಕ್ಕಟೀರ ರನ್ನ, ಮನೋಜ್, ಹಂಚಿಮನೆ ಶಶಿದರ್, ಚಂದ್ರಶೇಖರ್, ಜಗದೀಶ್,ಪುಲಿಯಂಡ ರೋಶನ್, ಕಾಳಪಂಡ ಸುಜಾ, ಮುಕ್ಕಟೀರ ವಸಂತ, ಗುತ್ತಿಗೆದಾರ ಆರ್ಮುಗ, ನವೀನ್, ಹಾಜರಿದ್ದರು.