Advertisement

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

11:27 AM Feb 07, 2019 | Team Udayavani |

ಧಾರವಾಡ: ಸರ್ಕಾರಗಳು ಪ್ರತಿಯೊಬ್ಬರ ಜೀವದ ರಕ್ಷಣೆ ಹಾಗೂ ಜೀವನದ ಭದ್ರತೆ, ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಪೊಲೀಸ್‌ ಸ್ನೇಹ ಜನವ್ಯವಸ್ಥೆ ರೂಪುಗೊಂಡಾಗ ಮಾತ್ರ ಆ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಹೇಳಿದರು.

Advertisement

ನಗರದ ಕಲಾಭವನದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಜಿಲ್ಲಾಡಳಿತ, ಸಾರಿಗೆ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಜನರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತವೆ. ಅವರ ಪಾಲ್ಗೊಳ್ಳುವಿಕೆಯಿಂದ ಯೋಜನೆ ಉದ್ದೇಶ ಈಡೇರುತ್ತದೆ. ಜನರು ಪೊಲೀಸ್‌ ಆಗಬೇಕು ಮತ್ತು ಪೊಲೀಸರು ಸಹೃದಯ ನಾಗರಿಕರಾಗಬೇಕು. ಅಂದಾಗ ಮಾತ್ರ ಅಪಘಾತ, ಅಪರಾಧ, ಅನಾಹುತಗಳು ಕಡಿಮೆ ಆಗುತ್ತವೆ ಎಂದು ಹೇಳಿದರು.

ಕರಪತ್ರ ಬಿಡುಗಡೆ: ಇದೇ ವೇಳೆ ರಸ್ತೆ ಸುರಕ್ಷತೆ ಕುರಿತ ಕರಪತ್ರಗಳನ್ನು ಸಿಇಒ ಡಾ| ಬಿ.ಸಿ. ಸತೀಶ್‌, ಸ್ಟಿಕರ್‌ಗಳನ್ನು ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಸುರಕ್ಷತಾ ಜಾಗೃತಿಯ ವಿಡಿಯೋ ಕ್ಲಿಪ್‌ ಗಳನ್ನು ಉಪಪೊಲೀಸ್‌ ಆಯುಕ್ತ ರವೀಂದ್ರ ಗಡಾದಿ ಮತ್ತು ಮಾಹಿತಿ ಪುಸ್ತಕಗಳನ್ನು ಪೊಲೀಸ್‌ ಆಯುಕ್ತ ಎಂ.ಎನ್‌ ನಾಗರಾಜ ಬಿಡುಗಡೆ ಮಾಡಿದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮತ್ತು ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಅಧ್ಯಕ್ಷ ಪಿ.ವಿ. ಹಿರೇಮಠ ಮಾತನಾಡಿದರು. ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಅಧ್ಯಕ್ಷತೆ ವಹಿಸಿದ್ದರು. ಉಪಪೊಲೀಸ್‌ ಆಯುಕ್ತ ರವೀಂದ್ರ ಗಡಾದಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್‌.ಎಂ. ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌.ಎಸ್‌. ಮುಳ್ಳೂರ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವಜ್ಞ, ಜಿಲ್ಲಾ ಉಪಪೊಲೀಸ್‌ ವರಿಷ್ಠಾಧಿಕಾರಿ ಡಾ| ರಾಮನಗೌಡ ಹಟ್ಟಿ, ಜಿಲ್ಲಾ ಅಥೊರ್ಪೇಡಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ| ಸತೀಶ ಇರಕಲ್ಲ, ಧಾರವಾಡ ಬಾಂಡ್ಸ್‌ ಅಧ್ಯಕ್ಷ ಕಿರಣ ಹಿರೇಮಠ, ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗನೂರ ಸೇರಿದಂತೆ ಹಲವರು ಇದ್ದರು.

Advertisement

ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿ ಆಗಿರುವ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಳಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಮುರಗೇಶ ಚಣ್ಣನ್ನವರ ಸ್ವಾಗತಿಸಿ, ವಂದಿಸಿದರು.

ವಾಹನ ಚಾಲನೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವಳಿ ನಗರದಲ್ಲಿ 2016ರಲ್ಲಿ 3 ಕೋಟಿ, 2017ರಲ್ಲಿ 4.5 ಕೋಟಿ ಮತ್ತು 2018ರಲ್ಲಿ 6.5 ಕೋಟಿ ರೂ.ಗಳನ್ನು ವಾಹನ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಅವಳಿ ನಗರ ವ್ಯಾಪ್ತಿಯಲ್ಲಿ 26 ಕೊಲೆ ಪ್ರಕರಣ ಮತ್ತು 400 ಅಪಘಾತದಲ್ಲಿ ಸಾವು ಸಂಭವಿಸಿವೆ. ಪೊಲೀಸ್‌ ಇಲಾಖೆ ಪರಿಣಾಮಕಾರಿ ಕಾರ್ಯ ಮತ್ತು ಮುಂಜಾಗ್ರತೆಗಳಿಂದಾಗಿ ಹಿಂದಿನ ವರ್ಷಗಳಿಗೆ ಹೊಲಿಕೆ ಮಾಡಿದರೆ ಶೇ.38ರಷ್ಟು ಕೊಲೆ, ಅಪರಾಧ ಪ್ರಕರಣಗಳು ಪ್ರಸಕ್ತ ಸಾಲಿನಲ್ಲಿ ಕಡಿಮೆ ಆಗಿವೆ.
•ಎಂ.ಎನ್‌. ನಾಗರಾಜ್‌,
ಪೊಲೀಸ್‌ ಆಯುಕ್ತರು, ಹು-ಧಾ

Advertisement

Udayavani is now on Telegram. Click here to join our channel and stay updated with the latest news.

Next