Advertisement

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

12:24 PM Jun 04, 2020 | mahesh |

ಯಲಬುರ್ಗಾ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯ ಪ್ರಸ್ತುತ ಎಲ್ಲ ಕಾಮಗಾರಿಗಳು ರೈತರ ಪರವಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು
ಜನತೆ ಮುಂದೆ ಬರಬೇಕು ಎಂದು ಪಿಡಿಒ ಚೆನ್ನಬಸವನಗೌಡ ಪಾಟೀಲ ಹೇಳಿದರು.

Advertisement

ಕುದರಿಕೋಟಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಆರಂಭಿಸಲಾದ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಹೊಂಡ, ಬದು ನಿರ್ಮಾಣ, ಕೆರೆ ನಿರ್ಮಾಣ, ಇಂಗುಗುಂಡಿ, ಚೆಕ್‌ಡ್ಯಾಂ, ಹೂಳೆತ್ತುವುದು, ತಡೆಗೋಡೆ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ ಮುಂತಾದ ಕಾಮಗಾರಿಗಳು ಉದ್ಯೋಗ ಖಾತರಿ ಯೋಜನೆಯಲ್ಲಿವೆ. ಕೂಲಿಕಾರರು ಮತ್ತು ರೈತರು ಗ್ರಾಪಂಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದು ಕೆಲಸ ನಿರ್ವಹಿಸಬೇಕು ಎಂದರು.

ಕೋವಿಡ್ ಲಾಕ್‌ಡೌನ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಒಟ್ಟಾರೆಯಾಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ
ಶ್ರಮಿಸಲಾಗುತ್ತದೆ. ಕೂಲಿಕಾರರಿಗೆ ಕೆಲಸ ನಿರ್ವಹಣೆ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಪರೀಕ್ಷೆ ಸಹ ಮಾಡಲಿದ್ದಾರೆ ಎಂದರು.

ಗ್ರಾಪಂ ಸದಸ್ಯರಾದ ಸಿದ್ದಲಿಂಗಯ್ಯ ಬಳಗೇರಿಮಠ, ಹನುಮಂತಪ್ಪ ಮೇಟಿ, ವೀರಯ್ಯ ಬಳಗೇರಿಮಠ, ರುದ್ರೇಶ ಮಲಕಸಮದ್ರ, ಸಿದ್ದಪ್ಪ ಹಾಗೂ ಕೂಲಿಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next