Advertisement

ನಮ್ಮೇರಿಕ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ

06:47 PM Apr 21, 2021 | Team Udayavani |

ನಮ್ಮೇರಿಕ ಸಂಸ್ಥೆಯು ಮೊದಲ ಬಾರಿಗೆ ಆಯೋಜಿಸಿರುವ ಅಂತಾರಾಷ್ಟ್ರೀಯ ಕನ್ನಡ ಆನ್‌ಲೈನ್‌ ನಾಟಕೋತ್ಸವಕ್ಕೆ ಎ. 10ರಂದು ಚಾಲನೆ ನೀಡಲಾಯಿತು. ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿರುವ  ನಟ, ನಾಟಕ ರಚನೆಕಾರ ಶ್ರೀನಿವಾಸ್‌ ಪ್ರಭು ಮಾತನಾಡಿ, ಐದು ದೇಶಗಳನ್ನು ಒಟ್ಟಿಗೆ ಸೇರಿಸುವ ಸಾಹಸಕ್ಕೆ ನಮ್ಮೇರಿಕ ಕೈ ಹಾಕಿದ್ದು ಇದನ್ನು ಮೆಚ್ಚಲೇಬೇಕಿದೆ. ಇದು ಪ್ರತಿ ವರ್ಷ ನಡೆಯುವಂತಾಗಲಿ. ಇದೊಂದು ದೊಡ್ಡ ಮಟ್ಟದ ಸಾಹಸ ಎಂದರು.

Advertisement

ನಿರೀಕ್ಷೆಗಳನ್ನು ಇಟ್ಟಿಕೊಳ್ಳುವುದು ಬಹಳ ಅಪಾಯ. ಹೊಸ ರೀತಿಯ ಅನುಭವವಿದು. ರಂಗಭೂಮಿ ಮತ್ತು ತಾಂತ್ರಿಕತೆಯನ್ನು ಬಳಸಿಕೊಂಡು ಮಾಡುತ್ತಿರುವ ಒಂದು ಹೊಸ ಅನುಭವ ಇದು ಎಂದು ಹೇಳಿ ಕಲಾವಿದರಿಗೆ, ಆಯೋಜಕರಿಗೆ ಶುಭ ಹಾರೈಸಿದರು.

ತೀರ್ಪುಗಾರರಾದ ಸಾಹಿತಿ ಚಂಪಾ ಶೆಟ್ಟಿ ಮಾತನಾಡಿ, ಒಂದುವರೆ ವರ್ಷದಿಂದ ನಾಟಕಗಳು ನಡೆಯದೆ ಏನೋ ಕಳೆದುಕೊಂಡಂತಾಗಿತ್ತು. ನಾಟಕಗಳ ಬಗ್ಗೆ ತೀರ್ಪುಕೊಡುವುದು ತುಂಬಾ ಕಷ್ಟ.ಯಾಕಂದರೆ ಪ್ರತಿಯೊಬ್ಬರಿಗೂ ಅದು ವಿಭಿನ್ನ ಅನುಭವವನ್ನು ಕೊಡುತ್ತದೆ. ಹೀಗಾಗಿ ಇಲ್ಲಿ ಸ್ಪರ್ಧೆ ಎನ್ನುವುದು ನೆಪ ಮಾತ್ರ. ವೇದಿಕೆಯಲ್ಲಿ ನಾಟಕ ಪ್ರದರ್ಶನವೇ ಗೆದ್ದಂತೆ ಎಂದರು.ತೀರ್ಪುಗಾರರಾದ ರಂಗಭೂಮಿ ಕಲಾವಿದೆ ಸುನೇತ್ರಾ ಪಂಡಿತ್‌ ಮಾತನಾಡಿ, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಕಲಾ ತಂಡಗಳಿಗೆ ಶುಭಹಾರೈಸಿದರು.ರಂಗಭೂಮಿ ನಾಟಕ ನಿರ್ದೇಶಕ ಚೈತನ್ಯ ಕೆ.ಎಂ. ಮಾತನಾಡಿ, ನಾಟಕಗಳನ್ನು ರಂಗಭೂಮಿಯಲ್ಲಿ ನೇರವಾಗಿ ನೋಡಿ ಅಭ್ಯಾಸ. ಇದೀಗ ಮೊದಲ ಬಾರಿಗೆ ಆನ್‌ಸ್ಕ್ರೀನ್‌ ನೋಡಿ ನ್ಯಾಯ ಸಲ್ಲಿಸುವ ಸವಾಲು ನಮ್ಮ ಮುಂದಿದೆ ಎಂದರು.

ತೀರ್ಪುಗಾರರಾದ ವಿದ್ಯಾ ಮಳವಳ್ಳಿ ಮಾತನಾಡಿ, ಕೊರೊನಾ ಎನ್ನುವುದು ನಮ್ಮನ್ನು ಬಿಕ್ಕಟ್ಟಿಗೆ ಹೇಗೆ ಸಿಕ್ಕಿಸಿತೋ ಅದೇ ರೀತಿ ಮುಕ್ತತೆಗೂ ಅವಕಾಶ ನೀಡಿತು. ನಾವೆಲ್ಲರೂ ಒಟ್ಟಿಗೆ ಸೇರಿ ನಾಟಕದ ಏಕೀಕರಣ ಮಾಡುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ. ಈ ಬಗ್ಗೆ ಯೋಚನೆ ಮಾಡಿದ್ದೇ ಬಹುದೊಡ್ಡ ವಿಚಾರ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಮೋಹನ ಕೃಷ್ಣ ರಾವ್‌ ಮಾತನಾಡಿ, ಮೊತ್ತ ಮೊದಲ ಬಾರಿಗೆ ನಾಟಕಕ್ಕೆ ವಿಶ್ವ ಮಟ್ಟದ ವೇದಿಕೆ ದೊರೆತಿದೆ. ಇದೊಂದು ಅದ್ಭುತವಾದ ಯೋಚನೆ. ಪ್ರತಿಯೊಂದು ನಾಟಕಗಳು ಕಲಿಯಲು ಒಂದು ಅವಕಾಶ ಮತ್ತು ಜೀವನಕ್ಕೆ ಬೇಕಾದ ಅನುಭವಗಳನನ್ನು ಕೊಡುತ್ತದೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.

Advertisement

ನಾಟಕ ನಿರ್ದೇಶಕರಾದ ಡಾ| ರಾಜಶ್ರೀ ಅವರು ತಾವು ಪ್ರಸ್ತುತಪಡಿಸಲಿರುವ ನಾಟಕ ಹಾಗೂ ಅದಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿ ಕುರಿತು ವಿವರಿಸಿದರು.ನಾಟಕ ಬರಹಗಾರ ಶರತ್‌ ಪರ್ವತವಾಣಿ ಮಾತನಾಡಿ, ಒಂದೂವರೆ ವರ್ಷದ ಬಳಿಕ ಥಿಯೇಟರ್‌ನ ಶಕ್ತಿ ಪ್ರದರ್ಶನಗೊಳ್ಳಲಿದೆ ಎಂದರು.ನಾಟಕ ನಿರ್ದೇಶಕ ಉಮೇಶ್‌ ಜೋಯಿಸ್‌ ಮಾತನಾಡಿ, ನಾಟಕ ಪ್ರದರ್ಶನಕ್ಕೆ ನಡೆಯುತ್ತಿದ್ದ ತಯಾರಿಯನ್ನು ನಾವು ತುಂಬಾ ಖುಷಿಪಟ್ಟಿದ್ದೇವೆ. ಇದನ್ನು ನಾವು ಸ್ಪರ್ಧೆಯಾಗಿ ಪರಿಗಣಿಸಿಲ್ಲ. ಇದೊಂದು ಪ್ರದರ್ಶನಕ್ಕೆ ವೇದಿಕೆ ಎಂದೇ ಪರಿಗಣಿಸಿದ್ದೇವೆ ಎಂದರು.

ನಾಟಕ ನಿರ್ದೇಶಕರು, ಕಲಾವಿದರಾದ ಸಂದೀಪ್‌ ಮಂಜುನಾಥ್‌, ಮಂಗಳಾ ಗೋಪಾಲಕೃಷ್ಣ, ಶೀತಲ್‌ ರಾವ್‌, ನಟ ಪ್ರಸನ್ನ ಕುಮಾರ್‌ ವಿ., ಪದ್ಮಿನಿ ಹೇಮಂತ್‌, ಶ್ಯಾಮಸುಂದರ್‌ ನಾಯಕ್‌, ಪವನ್‌ ಜಾನಕಿರಾಮ್‌, ರೋಹಿಣಿ ದ್ವಾರಕಾನಾಥ್‌, ವಲ್ಲೀಶ್‌ ಶಾಸಿŒ, ಪವನ್‌ ಜಾನಕಿರಾಮ್‌ ಮತ್ತಿತರರು ಮಾತನಾಡಿ, ತಾವು ಪ್ರಸ್ತುತ ಪಡಿಸಲಿರುವ ನಾಟಕದ ಕುರಿತು ವಿವರಿಸಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ರಕರ್ತ ಅಜಿತ್‌ ಹನುಮಕ್ಕನವರ್‌, ತೀರ್ಪುಗಾರರಾದ ಮಹೇಶ್‌ ದತ್ತಾನಿ ಉಪಸ್ಥಿತರಿದ್ದು ಶುಭಹಾರೈಸಿದರು.ನಮ್ಮೇರಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆನಂದ ರಾವ್‌ ಕಾರ್ಯಕ್ರಮ ನಿರೂಪಿಸಿ, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ನಾಟಕೋತ್ಸವ ಸ್ಪರ್ಧೆಯ ಮೊದಲ ನಾಟಕವನ್ನು ಎ. 10ರಂದು ಬೆಂಗಳೂರಿನ ಯುಆ್ಯಂಡ್‌ಮೀ ರಂಗಭೂಮಿ ಕಲಾವಿದರು ಪರ್ವತವಾಣಿ ಅವರ “ವಾರ್ಷಿಕೋತ್ಸವ’,  ತ್ರಿವೇಣಿ ನ್ಯೂಜರ್ಸಿ ಕನ್ನಡ ಸಂಘದ ಸದಸ್ಯರು ಎಚ್‌. ಡುಂಡಿರಾಜ್‌ ಅವರ “ಕೊರಿಯಪ್ಪನ ಕೊರಿಯೋಗ್ರಫಿ’, ಎ. 11ರಂದು ಬೆಳಕು ಚಿತ್ರ ನಾಟಕ ಅರ್ಪಿಸುವ ಚಂದ್ರಶೇಖರ ಪಾಟೀಲ ರಚನೆಯ “ಕುಂಟಾ ಕುಂಟಾ ಕುರವತ್ತಿ’, ಟಿ.ಪಿ. ಕೈಲಾಸಂ ರಚನೆಯ “ಗಂಡಸ್ಕತ್ರಿ’ ನಾಟಕ ಹಾಗೂ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ವತಿಯಿಂದ ಎಚ್‌. ಡುಂಡಿರಾಜ್‌ ಅವರ “ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನಗೊಂಡಿತು

ಎ. 17ರಂದು ಅನಂತ ನಮನ ನಾಟಕ ತಂಡದಿಂದ ಪರ್ವತವಾಣಿ ಅವರ “ನಾನು ನೀನೇ’, ಬೃಂದಾವನ ಕನ್ನಡ ಕೂಟದಿಂದ  ಎಸ್‌. ಗುಂಡುರಾವ್‌ ಅವರ “ಭಾವ ಮೈದುನ’, ಎ. 18ರಂದು ಹಾಲೆಂಡ್‌ ನಾಟಕ ಮಂಡಳಿಯಿಂದ ಶರತcಂದ್ರ ಅವರ ದೇವದಾಸ, ಆಂಟನ್‌ ಚೆಕೋವ್‌ ಅವರ “ಕರಡಿ ಮತ್ತು ವಿಧವೆ’ ನಾಟಕ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next