Advertisement
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸಪ್ತಾಹಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ಡ್ರಮ್‌ವಾದಕ ಆನಂದನ್ ಶಿವಮಣಿ ಅವರಿಂದ ಸಂಗೀತವಾದನ ಕಾರ್ಯಕ್ರಮ ನಡೆಯಿತು. ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಇದರ ಪ್ರದಾನ ಅರ್ಚಕ, ಜಿಪಿಟಿ ವಿಶ್ವಸ್ಥ ಸದಸ್ಯ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಸಂಯೋಜನೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿಎ ಮತ್ತು ಜಿಪಿಟಿ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್. ಕಟೀಲು ಮತ್ತು ವಿಜಯಲಕ್ಷ್ಮೀ ಎಸ್. ರಾವ್ ದಂಪತಿ, ಉಭಯ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡು ಶ್ರೀ ವಿಶ್ವೇಶತೀರ್ಥರ ಪ್ರಥಮ ರಜತ ತುಲಾಭಾರ ನೆರವೇರಿಸಿದರು.
ಸಪ್ತದಿನಗಳಲ್ಲಿ ಪ್ರತಿದಿನ ಸಂಜೆ 6 ರಿಂದ ರಾತ್ರಿ 8ರ ವರೆಗೆ ಶ್ರೀಗಳ ರಜತ ತುಲಾಭಾರ ನಡೆಯಲಿದೆ. ಜೂ. 25ರಂದು ಶ್ರೀ ಅದಮಾರು ಮಠ ಇರ್ಲಾ ಅಂಧೇರಿ ಪಶ್ಚಿಮ, ಜೂ. 26ರಂದು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜರಿಮರಿ, ಜೂ. 27 ರಂದು ಶ್ರೀ ಸುಬ್ರಹ್ಮಣ್ಯ ಮಠ, ಛೆಡ್ಡಾ ನಗರ್ ಚೆಂಬೂರು, ಜೂ.28 ರಂದು “ಆಶ್ರಯ’ ನೆರೂಲ್ ನವಿಮುಂಬಯಿ, ಜೂ. 29 ಮತ್ತು ಜೂ. 30ರಂದು ಶ್ರೀ ಪೇಜಾವರ ಮಠ ಸಾಂತಾಕ್ರೂಜ್ ಪೂರ್ವ ಇಲ್ಲಿ ನಡೆಯಲಿದೆ. ಜೂ. 30ರಂದು ಬೆಳಗ್ಗೆ 10ರಿಂದ ಗೋಕುಲ ನಿವೇಶನ ಸಾಯನ್ ಇಲ್ಲಿ ಪೇಜಾವರ ಶ್ರೀಗಳಿಂದ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸ ಹಾಗೂ ಶ್ರೀಪಾದಂಗಳವರಿಗೆ ಪಟ್ಟದ ದೇವರ ಸಹಿತ ತುಲಾಭಾರ ಸೇವೆಯೊಂದಿಗೆ ಸಂಜೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ತುಲಾಭಾರ ಸಪ್ತಾಹ ಸಮಾರೋಪ ನಡೆಸಲಾಗುವುದು ಎಂದು ಉಭಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ತುಲಾಭಾರ ಸಮಿತಿಯ ಸಂಚಾಲಕರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
Related Articles
Advertisement