Advertisement

ಧಾರ್ಮಿಕ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ

09:05 PM Mar 24, 2021 | Team Udayavani |

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ಕಂಕಣಧಾರಣೆ ಹಾಗೂ ವಾರೋತ್ಸವಗಳೊಂದಿಗೆ ಜಾತ್ರೆಯ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನೀಕೇರಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

Advertisement

ಮಾ. 29 ರಂದು ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದ ಮುಂಚೆ ಧಾರ್ಮಿಕ ವಿಧಿ  ವಿಧಾನಗಳು ಆರಂಭಗೊಂಡಿವೆ. ಒಳಮಠದ ಕಂಕಣ ಧಾರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಧಿಕಾರಿ ಕವಿತಾ ಎಸ್‌. ಮನ್ನೀಕೇರಿ ದೀಪ ಬೆಳಗಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರು.

ವಾರೋತ್ಸವ ಹಾಗೂ ಕಂಕಣಧಾರಣೆ ಕಾರ್ಯಗಳು ಒಂದೇ ಬಾರಿ ಜರುಗಿದವು. ದೇವಾಲಯದ ಒಳಾಂಗಣದಲ್ಲಿ ಅಲಂಕೃತ ಕುಂಭಗಳು ಹಾಗೂ ದೀಪಗಳೊಂದಿಗೆ ಕಂಕಣ ಧಾರಣೆ ಮಾಡಲಾಯಿತು. ರಥೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಮುಖರಿಗೆ ಕಂಕಣಧಾರಣೆ ಮಾಡಲಾಯಿತು. ಅಲಂಕೃತವಾದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಾಲಯದ ಒಳಾಂಗಣದಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಲಾಯಿತು. ಭಕ್ತರು ದೇವಾಲಯದ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಉತ್ಸವದಲ್ಲಿ ನಂದಿಧ್ವಜ ದೇವಾಲಯದ ಮಂಗಳ ವಾದ್ಯಗಳಿದ್ದವು. ಪಟ್ಟಣ ಹಾಗೂ ಸುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಮಂಗಳವಾರದಿಂದ ನಂತರದ ಭಾನುವಾರದವರೆಗೆ ಪ್ರತಿದಿನ ದಿನೋತ್ಸವಗಳು ಜರುಗಲಿವೆ. ಪ್ರತಿದಿನ ಒಂದು ಗಜ,ಅಶ್ವ, ನವಿಲು ಸೇರಿದಂತೆ ವಾಹನಗಳ ಉತ್ಸವ ಜರುಗಲಿದೆ. ರಥೋತ್ಸವಕ್ಕಾಗಿ ಹೊರಮಠ, ಒಳಮಠಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಕಂಕಣ ಧಾರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಪಪಂ ಅಧ್ಯಕ್ಷ ಎನ್‌. ಮಹಾಂತಣ್ಣ, ರಾಜಸ್ವ ನಿರೀಕ್ಷಕ ಚೇತನ್‌, ಸಿಬ್ಬಂದಿ ಸತೀಶ್‌ ಪುರೋಹಿತ ಎಸ್‌.ವೈ. ಮುರುಳಿಕೃಷ್ಣ ಸೇರಿದಂತೆ ಪಟ್ಟಣದ ಪ್ರಮುಖರು, ಜನಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next