Advertisement
ಮಳೆಗಾಲ ಮುಗಿದ ಬಳಿಕ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಛಾವಣಿ ಸೋರಿಕೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಾಂತರಕ್ಕೆ ಬದಲಿ ಸರಕಾರಿ ಕಟ್ಟಡ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಡಕಚೇರಿ ಅವ್ಯವಸ್ಥೆಗಳ ಕುರಿತು ‘ಉದಯವಾಣಿ’ ಸುದಿನ ಸಚಿತ್ರ ವರದಿ ಪ್ರಕಟಿಸಿತ್ತು. ನೂತನ ಕಟ್ಟಡದ ಕಾಮಗಾರಿಯು 20 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ಗ್ರಾ.ಪಂ. ಕಚೇರಿಯ ಕಟ್ಟಡದಲ್ಲಿ ನಾಡಕಚೇರಿಗೆ ಸ್ಥಳಾವಕಾಶ ಕೋರಲಾಗಿತ್ತು. ಗ್ರಾ.ಪಂ. ಆಡಳಿತ ಹಳೆಯ ನಾಡ ಕಚೇರಿಯ ನೆಲ ಅಂತಸ್ತನ್ನು ಪಂಚಾಯತ್ ವಾಣಿಜ್ಯ ಸಂಕೀರ್ಣ ರಚಿಸಲು ಒದಗಿಸಿದರೆ ಮಾತ್ರ ಮೇಲಂತಸ್ತಿನಲ್ಲಿ ನಾಡಕಚೇರಿಗೆ ಸ್ಥಳ ನೀಡಲಾಗುವುದು ಎನ್ನುವ ನಿರ್ಣಯ ಮಾಡಿದೆ. ಜಿಲ್ಲಾಧಿಕಾರಿ ಜತೆ ಒಪ್ಪಂದದ ಚರ್ಚೆಗೆ ದಿನ ಕಾಯಲಾಗುತ್ತಿದೆ.