ವಿಜಯಪುರ: ಪಟ್ಟಣ ವ್ಯಾಪ್ತಿಯಲ್ಲಿ 1.20 ಕೋಟಿರೂ.ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ಎನ್. ನಾರಾಯಣಸ್ವಾಮಿ ಚಾಲನೆ ನೀಡಿದರು.
ಪಟ್ಟಣದ 22ನೇ ವಾರ್ಡ್‌ನ ದೇವಣ್ಣನಕುಂಟೆ ಬಳಿ ಪಾರ್ಕ್, ಕಾಂಪೌಂಡ್ ನಿರ್ಮಾಣ, ಒಣತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ 1.20 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ದೇವಣ್ಣನಕುಂಟೆ ಅಭಿವೃದ್ಧಿ,ಒಣ ತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ 10.25 ಲಕ್ಷರೂ., ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ 8.90ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಪಟ್ಟಣದಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ದೇವನಹಳ್ಳಿ-ವಿಜಯಪುರ ಅವಳಿ ನಗರಗಳನ್ನಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಲುಅಧಿವೇಶನದಲ್ಲಿ ಗಮನ ಸೆಳೆಯಲಾಗಿದೆ.ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿತಾಲೂಕಿನ ಎರಡೂ ಪುರಸಭೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.ನೀರಿನ ಸಮಸ್ಯೆಗೆ ಕ್ರಮ: ಪಟ್ಟಣದಲ್ಲಿ ಅಗತ್ಯಇರುವ ಕಡೆ ಬೋರ್‌ವೆಲ್ ಕೊರೆಯಲು ಕ್ರಮಕೈಗೊಳ್ಳಲಾಗಿದೆ. ವೆಂಕಟಗಿರಿಕೋಟೆ ಕೆರೆಗೆ ಹರಿದು ಬಂದಿರುವ ಎಚ್.ಎನ್. ವ್ಯಾಲಿ ನೀರನ್ನುದಂಡಿಗಾನಹಳ್ಳಿ ಕೆರೆಯ ಮೂಲಕ ವಿಜಯಪುರಅಮಾನಿಕೆರೆ, ಚಿಕ್ಕನಹಳ್ಳಿ ಕೆರೆಗೆ ಹರಿಸಲು ಯೋಜನೆರೂಪಿಸಲಾಗಿದೆ. ಮುಂದಿನ ತಿಂಗಳ ಆರಂಭದಲ್ಲಿಯೇ ಹೆಬ್ಟಾಳ-ನಾಗವಾರ ಕೆರೆ ಮೂಲಕ ವೆಂಕಟಗಿರಿಕೋಟೆ ಕೆರೆಗೆ ಹರಿಯುವ ನೀರನ್ನುಚಿಕ್ಕನಹಳ್ಳಿ ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಂತರ್ಜಲ ಹೆಚ್ಚಿ, ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗಲಿದೆ ಎಂದು ವಿವರಿಸಿದರು.
ಅನುದಾನ ಬಿಡುಗಡೆ: ಬೇಸಿಗೆಯಲ್ಲಿ ಕುಡಿಯುವನೀರಿನ ಬವಣೆ ತಪ್ಪಿಸಲು 50 ಲಕ್ಷ ರೂ.ನತೆ 2ಕಂತುಗಳಲ್ಲಿ ಅನುದಾನ ಬಿಡುಗಡೆಯಾಗಿದ್ದು,ಶೀಘ್ರವೇ ಎಲ್ಲಿಯೂ ನೀರಿಗೆ ಅಭಾವವಾಗದಂತೆನೋಡಿಕೊಳ್ಳಲು ಯೋಜನೆ ರೂಪಿಸಲಾಗುವುದುಎಂದರು. 15ನೇ ವಾರ್ಡ್‌ನ ಸುಣ್ಣಕಲ್ಲುಗೂಡುಬಳಿ, 5ನೇ ವಾರ್ಡ್‌ನ ಧರ್ಮರಾಯ ಸ್ವಾಮಿದೇಗುಲ ಬಳಿ ಕೊಳವೆಬಾವಿ ಕೊರೆಯುವಕಾಮಗಾರಿಗೆ ಪೂಜೆ ನೆರವೇರಿಸಲಾಯಿತು. 10ನೇವಾರ್ಡ್‌ನ ಗಾಂಧಿ ಚೌಕದ ರಸ್ತೆ ಡಾಂಬರೀಕರಣ,4ನೇ ವಾರ್ಡ್‌ನ ದಂಡಿಗಾನಹಳ್ಳಿ ರಸ್ತೆಯಕೊಂಡೇನಹಳ್ಳಿ ಜಮೀನಿಗೆ ಕಾಂಪೌಂಡ್ ನಿರ್ಮಾಣಕಾಮಗಾರಿಗೆ ಚಾಲನೆ ನೀಡಲಾಯಿತು.
ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಕಾರಹಳ್ಳಿ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ,ಪುರಸಭಾ ಮಾಜಿ ಅಧ್ಯಕ್ಷ ಎಂ.ಚಿನ್ನಯ್ಯ, ಮಾಜಿಸದಸ್ಯ ಎನ್. ನಾರಾಯಣಸ್ವಾಮಿ, ಎಂ.ಕೇಶವಪ್ಪ,ಎಚ್.ಎಂ.ಕೃಷ್ಣಪ್ಪ, ಟೌನ್ ಜೆಡಿಎಸ್ ಅಧ್ಯಕ್ಷ ಎಸ್ .ಭಾಸ್ಕರ್, ಕಾರ್ಯದರ್ಶಿ ಭುಜೇಂದ್ರ, ಹೋಬಳಿಜೆಡಿಎಸ್ ಅಧ್ಯಕ್ಷ ವೀರಪ್ಪ, ಕಾರ್ಯದರ್ಶಿಕಲ್ಯಾಣಕುಮಾರ್ ಬಾಬು, ಯಲುವಹಳ್ಳಿಅಶೋಕ್, ಎಸ್.ವಿ.ಬಸವರಾಜ್ ಕೆ.ಮುನಿರಾಜು,ಪ್ರಕಾಶ್, ಬೀರಪ್ಪ, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ಎಂಜಿನಿಯರ್ ಸುಪ್ರಿಯರಾಣಿ, ಗಂಗಾಧರ್ ಮತ್ತಿತರರು ಇದ್ದರು.